ಮುಂದೆ ? ಉತ್ತರಕ್ಕೆ ಭಾನುವಾರದವರೆಗೂ ಕಾಯಿರಿ -ದೇವೇಗೌಡ
ಮುಂದೆ ? ಉತ್ತರಕ್ಕೆ ಭಾನುವಾರದವರೆಗೂ ಕಾಯಿರಿ -ದೇವೇಗೌಡ
ಎಲ್ಲ ಸಾಧ್ಯತೆಗಳನ್ನೂ ಮುಕ್ತವಾಗಿರಿಸಿಕೊಂಡಿರುವ ಜಾತ್ಯತೀತ ಜನತಾದಳ
ಇದೊಂದು ಅತ್ಯಂತ ಸೂಕ್ಷ್ಮವಾಗಿದೆ. ತರಾತುರಿಯಲ್ಲಿ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ . ಪಕ್ಷದ ನಾಯಕರೊಂದಿಗೆ ಎಲ್ಲ ಸಾಧ್ಯತೆಗಳ ಕುರಿತು ಸಮಗ್ರ ಚರ್ಚೆ ನಡೆಸಿದ ನಂತರವೇ ತೀರ್ಮಾನ ಕೈಗೊಳ್ಳಲು ಸಾಧ್ಯ. ಭಾನುವಾರ ಈ ಬಗ್ಗೆ ಒಂದು ನಿರ್ಣಯಕ್ಕೆ ಬರಲಾಗುವುದು ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ ಹೇಳಿದರು.
ರಾಜ್ಯದಲ್ಲಿ ನಿರ್ಣಾಯಕ ಶಕ್ತಿಯಾಗಿ ಜಾತ್ಯತೀತ ಜನತಾದಳವನ್ನು ಜನತೆ ರೂಪಿಸಿದೆ. ಜನತೆಯ ಅಭಿಲಾಷೆಯಂತೆ ನಡೆಯಲಾಗುವುದು ಎಂದೂ ದೇವೇಗೌಡ ಹೇಳಿದರು.
ಪಕ್ಷದ ರಾಜಕೀಯ ವ್ಯವಹಾರಗಳ ಸಭೆ ಶುಕ್ರವಾರ ಸಂಜೆ ದೆಹಲಿಯಲ್ಲಿ ನಡೆಯುವುದು. ಈ ಸಭೆಯಲ್ಲಿ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲಾಗುವುದು. ಆನಂತರ ಪಕ್ಷದ ಶಾಸಕರ ಸಭೆ ಭಾನುವಾರ ಬೆಂಗಳೂರಿನಲ್ಲಿ ನಡೆಯುವುದು. ಈ ಸಭೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ವಹಿಸಬೇಕಾದ ಪಾತ್ರದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು.
ರಾಜ್ಯದ ಮತದಾರ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳನ್ನು ತಿರಸ್ಕರಿಸಿದ್ದಾನೆ. ಜನರ ಅಭಿಲಾಷೆ ಸುಳ್ಳಾಗಲು ನಾವು ಬಿಡುವುದಿಲ್ಲ ಎಂದು ದೇವೇಗೌಡ ತಿಳಿಸಿದರು. ಬಿಜೆಪಿಯನ್ನು ಬೆಂಬಲಿಸುವಿರಾ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಹೇಳದ ದೇವೇಗೌಡ- ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications