ಕೃಷ್ಣ ರಾಜೀನಾಮೆ: ತೆರೆಮರೆಯಲ್ಲಿ ಸರ್ಕಾರ ರಚನೆ ಪ್ರಕ್ರಿಯೆಗೆ ಚಾಲನೆ
ಕೃಷ್ಣ ರಾಜೀನಾಮೆ: ತೆರೆಮರೆಯಲ್ಲಿ ಸರ್ಕಾರ ರಚನೆ ಪ್ರಕ್ರಿಯೆಗೆ ಚಾಲನೆ
ನಿರ್ಣಾಯಕ ಸ್ಥಾನದಲ್ಲಿ ದೇವೇಗೌಡರ ಜಾತ್ಯತೀತ ಜನತಾದಳ
ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರನ್ನು ಗುರುವಾರ (ಮೇ 13) ಭೇಟಿ ಮಾಡಿದ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ತಮ್ಮ ಸರ್ಕಾರದ ರಾಜೀನಾಮೆ ಸಲ್ಲಿಸಿದರು. ಇದರಿಂದಾಗಿ ರಾಜ್ಯಪಾಲರು ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಂತಾಗಿದೆ.
ಈ ನಡುವೆ ರಾಜ್ಯದಲ್ಲಿ ಜಾತ್ಯತೀತ ಸರ್ಕಾರವನ್ನು ನಡೆಸುವ ಪ್ರಕ್ರಿಯೆಗಳು ಚುರುಕಾಗಿವೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜಾತ್ಯತೀತ ಜನತಾದಳ ಹಾಗೂ ಕಾಂಗ್ರೆಸ್‌ನ ಕೆಲವು ನಾಯಕರು ತೆರೆಮರೆಯ ಮಾತುಕತೆ ನಡೆಸಿದ್ದಾರೆ.
ಬಂಗಾರಪ್ಪನವರಿಗೆ ಲಕ್ ?
ಬಿಜೆಪಿಯ ನಾಯಕತ್ವವನ್ನು ಎಸ್.ಬಂಗಾರಪ್ಪ ವಹಿಸುವುದಾದರೆ ಅವರಿಗೆ ಬೆಂಬಲವನ್ನು ನೀಡಲು ಮಾಜಿ ಪ್ರಧಾನಿ ಹಾಗೂ ಜಾತ್ಯತೀತ ಜನತಾದಳದ ಮುಖಂಡ ಎಚ್.ಡಿ.ದೇವೇಗೌಡ ಉದ್ದೇಶಿಸಿದ್ದಾರೆ ಎನ್ನುವ ವದಂತಿಗಳು ರಾಜಕೀಯ ಮೊಗಸಾಲೆಗಳಲ್ಲಿ ವ್ಯಾಪಕವಾಗಿದೆ.
ಜಾತ್ಯತೀತ ಜನತಾದಳನ್ನು ಬಿಜೆಪಿ ಹೊರಗಿನಿಂದ ಬೆಂಬಲಿಸುವ ಮಾತುಗಳೂ ಕೇಳಿಬರುತ್ತಿವೆ.
ಬಿಜೆಪಿಗೆ ಬಿಡೆವು- ಪೂಜಾರಿ
ಕಾಂಗ್ರೆಸ್ ಹಿನ್ನಡೆ ಅನುಭವಿಸಿರುವುದಾಗಿ ಒಪ್ಪಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ, ಪಕ್ಷದ ಹಿನ್ನಡೆಗೆ ಕಾರಣಗಳನ್ನು ಹುಡುಕುವುದಾಗಿ ಹೇಳಿದ್ದಾರೆ.
ಇದೊಂದು ಅನಿರೀಕ್ಷಿತ ಹಿನ್ನಡೆ. ಆದರೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಲ್ಲ ಪ್ರಯತ್ನಗಳನ್ನೂ ಮಾಡುವುದಾಗಿ ಜನಾರ್ಧನ ಪೂಜಾರಿ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications