ಚಾಮರಾಜಪೇಟೆಯಲ್ಲಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣ ಪ್ರಯಾಸದ ಜಯ
ಚಾಮರಾಜಪೇಟೆಯಲ್ಲಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣ ಪ್ರಯಾಸದ ಜಯ
ಅನಿರೀಕ್ಷಿತ ಪೈಪೋಟಿ ನೀಡಿದ ಮುಖ್ಯಮಂತ್ರಿ ಚಂದ್ರು ಮೊದಲ ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದರೂ, ಅಂತಿಮ ನಗೆ ಕೃಷ್ಣ ಅವರದು. ಅವರಿಗೆ 13,432 ಮತಗಳ ಅಂತರದಿಂದ ಗೆಲುವು.
ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮುಖ್ಯಮಂತ್ರಿ ಚಂದ್ರು ಅವರನ್ನು ಸುಮಾರು 10 ಸಾವಿರ ಮತಗಳ ಅಂತರದಿಂದ ಕೃಷ್ಣ ಸೋಲಿಸಿದ್ದಾರೆ. ಅತ್ಯಂತ ರೋಚಕವಾಗಿದ್ದ ಮತ ಎಣಿಕೆಯ ಮೊದಲ ಮೂರು ಸುತ್ತುಗಳಲ್ಲಿ ಎಸ್ಸೆಂ.ಕೃಷ್ಣ ಹಿಂದೆ ಬಿದ್ದಿದ್ದರು. ಆದರೆ ಅಂತಿಮ ಸುತ್ತುಗಳಲ್ಲಿ ಚೇತರಿಸಿಕೊಂಡ ಕೃಷ್ಣ ಅಂತಿಮವಾಗಿ ಗೆಲುವಿನ ನಗೆ ಬೀರಿದರು.
ಕೃಷ್ಣ 13,432 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜಾತ್ಯತೀತ ಜನತಾದಳದ ಅಭ್ಯರ್ಥಿ ಅನಂತನಾಗ್ ಮೂರನೇ ಸ್ಥಾನದಲ್ಲಿದ್ದಾರೆ.
ಪ್ರಮೀಳಾ ನೇಸರ್ಗಿ ಅವರ ನಾಮಪತ್ರ ತಿರಸ್ಕೃತ ಪ್ರಕರಣದಿಂದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ದೇಶದ ಗಮನ ಸೆಳೆದಿತ್ತು . ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರು ಮದ್ದೂರಿನಿಂದ ಚಾಮರಾಜಪೇಟೆಗೆ ವಲಸೆ ಬಂದುದರಿಂದ ಕೂಡ ಈ ಕ್ಷೇತ್ರದ ಚುನಾವಣೆ ಕುತೂಹಲ ಉಂಟು ಮಾಡಿತ್ತು .
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications