ಜೆಡಿಎಸ್‌ಗೆ ಜಾಕ್‌ಪಾಟ್‌! ಮೇ14 ಶಾಸಕಾಂಗ ಪಕ್ಷದ ಮಹತ್ವದ ಸಭೆ

ಜೆಡಿಎಸ್‌ಗೆ ಜಾಕ್‌ಪಾಟ್‌! ಮೇ14 ಶಾಸಕಾಂಗ ಪಕ್ಷದ ಮಹತ್ವದ ಸಭೆ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು, ಸಿದ್ಧರಾಮಯ್ಯ ಹರ್ಷಚಿತ್ತ

ಬೆಂಗಳೂರು : ರಾಜ್ಯ ಚುನಾವಣಾ ಫಲಿತಾಂಶಗಳ ನಂತರ ಜಾತ್ಯತೀತ ಜನತಾದಳ ವಹಿಸಬೇಕಾದ ಪಾತ್ರದ ಕುರಿತು ನಿರ್ಣಯ ಕೈಗೊಳ್ಳಲು ಜೆಡಿಎಸ್‌ ಶಾಸಕಾಂಗ ಸಭೆ ಶುಕ್ರವಾರ (ಮೇ 14) ಬೆಂಗಳೂರಿನಲ್ಲಿ ನಡೆಯಲಿದೆ.

ಚುನಾವಣಾ ಫಲಿತಾಂಶದ ನಂತರದ ಪರಿಸ್ಥಿತಿಯಲ್ಲಿ ಜಾತ್ಯತೀತ ಜನತಾದಳ ಭವಿಷ್ಯದಲ್ಲಿ ವಹಿಸಬೇಕಾದ ಪಾತ್ರದ ಕುರಿತು ಶಾಸಕಾಂಗ ಸಭೆ ನಿರ್ಣಯಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿದ್ಧರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು. ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿನ ನಗು ಚೆಲ್ಲಿದ ನಂತರ ಸಿದ್ಧರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದ ಜನತೆ ಜಾತ್ಯತೀತ ಜನತಾದಳಕ್ಕೆ ನೀಡಿರುವ ಬೆಂಬಲದ ಕುರಿತು ಸಿದ್ಧರಾಮಯ್ಯ ಹರ್ಷ ವ್ಯಕ್ತಪಡಿಸಿದರು. ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಲ್‌.ರೇವಣ್ಣ ಸಿದ್ಧಯ್ಯ ಅವರನ್ನು ಸೋಲಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಕುರುಕ್ಷೇತ್ರ-2004

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+