ಆಂಧ್ರ: ಮುಖ್ಯಮಂತ್ರಿಅಭ್ಯರ್ಥಿಯಾಗಿ ವೈ. ಎಸ್. ರಾಜಶೇಖರ ರೆಡ್ಡಿ
ಆಂಧ್ರ: ಮುಖ್ಯಮಂತ್ರಿಅಭ್ಯರ್ಥಿಯಾಗಿ ವೈ. ಎಸ್. ರಾಜಶೇಖರ ರೆಡ್ಡಿ
ದಶಕದ ರಾಜಕೀಯ ಹೋರಾಟಕ್ಕೆ ಸಂದ ಫಲ
ಮೇ 12ರ ಬುಧವಾರ ನಡೆದ ಕಾಂಗ್ರೆಸ್ ಶಾಸಕರ ಸಭೆ ತಮ್ಮ ನಾಯಕನನ್ನಾಗಿ ರಾಜಶೇಖರ ರೆಡ್ಡಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿತು. ಮುಖ್ಯಮಂತ್ರಿ ಸ್ಥಾನಕ್ಕೆ ಓರ್ವ ಸ್ಪರ್ಧಿಯಾಗಿದ್ದ ಪಿಸಿಸಿ ಅಧ್ಯಕ್ಷ ಡಿ.ಶ್ರೀನಿವಾಸ್ ಅವರು ವೈಎಸ್‌ಆರ್ ಅವರ ಹೆಸರನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸೂಚಿಸಿದರು. ಕೆ.ರಂಗರಾವ್ ಅವರು ಈ ಸೂಚನೆಯನ್ನು ಅನುಮೋದಿಸಿದರು. ನೂತನ ಶಾಸಕರು ನಡೆಸಿದ ಎರಡು ಗಂಟೆಗಳ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಭಾಗವಹಿಸಿದ್ದರು.
55 ವರ್ಷದ ರಾಜಶೇಖರ ರೆಡ್ಡಿ ಅವರು ವಿಸರ್ಜಿತ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ನಾಯಕರಾಗಿದ್ದರು. ಅವರು ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಚುನಾಯಿತರಾಗಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications