ವಾರಾಂತ್ಯ ತವರಿಗೆ ಹೋಗುವ ಹೆಂಡತಿಯ ಕತ್ತುಹಿಸುಕಿ ಕೊಂದ ಗಂಡ
ವಾರಾಂತ್ಯ ತವರಿಗೆ ಹೋಗುವ ಹೆಂಡತಿಯ ಕತ್ತುಹಿಸುಕಿ ಕೊಂದ ಗಂಡ
ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಕೊಲೆ, ಆರೋಪಿ ಪೊಲೀಸರಿಗೆ ಶರಣು
ಅಡಿಕೆ ಮಂಡಿ ಮಾಲೀಕ ಆನಂದ್ ತನ್ನ ಹೆಂಡತಿ ವಾರಾಂತ್ಯದಲ್ಲಿ ತನ್ನ ಜೊತೆಗಿರದ ಕಾರಣಕ್ಕಾಗಿ ಅವಳ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿಯಿಂದ ವರದಿಯಾಗಿದೆ. ಕೊಲೆ ಮಾಡಿದ ನಂತರ ಆತ ಬೈಯಪ್ಪನಹಳ್ಳಿ ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿ ಆನಂದ್(28) ಆರು ವರ್ಷಗಳ ಹಿಂದೆ ಹಾಸನದ ಹುಡುಗಿ ಪುಷ್ಪಾ ಎಂಬಾಕೆಯನ್ನು ಮದುವೆಯಾಗಿದ್ದ. ದಂಪತಿಗಳಿಗೆ ನಾಲ್ಕು ವರ್ಷದ ಮಗುವೂ ಇತ್ತು. ಪುಷ್ಪಾ ಪ್ರತಿ ವಾರವೂ ತನ್ನ ತವರು ಮನೆಗೆ ಹೋಗಿ ಬರುತ್ತಿದ್ದಳು. ಈ ವಿಷಯದ ಕುರಿತು ಆನಂದ್ ವಿರೋಧ ವ್ಯಕ್ತ ಪಡಿಸಿದ್ದ ಮತ್ತು ಹಲವಾರು ಬಾರಿ ಜಗಳವೂ ನಡೆದಿತ್ತು.
ಮೇ 10ರ ಸೋಮವಾರ ರಾತ್ರಿ ಇದೇ ವಿಷಯದ ಮೇಲೆ ಗಂಡ ಹೆಂಡಿರ ನಡುವೆ ಜಗಳ ನಡೆಯಿತು. ತನ್ನ ಸಿಟ್ಟನ್ನು ಹತೋಟಿಗೆ ತರಲಾಗದ ಆನಂದ್ ದಿಂಬಿನಿಂದ ಉಸಿರು ಕಟ್ಟುವಂತೆ ಪುಷ್ಪಾಳ ಮುಖವನ್ನು ಅದುಮಿ ಕೊಲೆ ಮಾಡಿದ್ದಾನೆ. ಮೇ 11, ಮಂಗಳವಾರ ಬೆಳಗ್ಗೆ ಆನಂದ್, ಬೈಯಪ್ಪನಹಳ್ಳಿ ಪೊಲೀಸ್ ರಾಣೆಗೆ ಖುದ್ದಾಗಿ ಬಂದು ತನ್ನ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications