ಕಾಂಗ್ರೆಸ್‌ ಪುನಃ ಅಧಿಕಾರಕ್ಕೆ ಬಂದೇ ಬರುವುದು -ಕೃಷ್ಣ ವಿಶ್ವಾಸ ಅಚಲ

ಕಾಂಗ್ರೆಸ್‌ ಪುನಃ ಅಧಿಕಾರಕ್ಕೆ ಬಂದೇ ಬರುವುದು -ಕೃಷ್ಣ ವಿಶ್ವಾಸ ಅಚಲ
ದಕ್ಷಿಣದಲ್ಲಿ ಕಾಂಗ್ರೆಸ್‌ ಗಾಳಿ, ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ

ಬೆಂಗಳೂರು : ದಕ್ಷಿಣಭಾರತದಲ್ಲಿ ಕಾಂಗ್ರೆಸ್‌ ಪರ ಗಾಳಿ ಬೀಸುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ , ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ತ್ರಿಶಂಕು ವಿಧಾನಸಭೆ ಉಂಟಾಗುವುದಿಲ್ಲ . ಜನತೆ ಕಾಂಗ್ರೆಸ್‌ ಪಕ್ಷವನ್ನು ಆಶೀರ್ವದಿಸಿರುವ ಕುರಿತು ಸಂಪೂರ್ಣ ವಿಶ್ವಾಸವಿದೆ ಎಂದು ಬುಧವಾರ (ಮೇ 12) ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಹೇಳಿದರು. ಚುನಾವಣಾ ಫಲಿತಾಂಶಗಳ ಪ್ರಕಟಣೆಗಾಗಿ ವಿಶೇಷವಾಗಿ ಸಿದ್ಧಪಡಿಸಿರುವ ತಾತ್ಕಾಲಿಕ ಮಾಧ್ಯಮಕೇಂದ್ರದಲ್ಲಿ ಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡಿದರು.

ಆಡಳಿತ ವಿರೋಧಿ ಅಲೆ ರಾಜ್ಯದಲ್ಲಿ ಬೀಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಕೃಷ್ಣ - ದಕ್ಷಿಣಭಾರತದಲ್ಲಿ ಕಾಂಗ್ರೆಸ್‌ ಪರ ಗಾಳಿ ಪ್ರಬಲವಾಗಿದ್ದು , ಆಂಧ್ರಪ್ರದೇಶದ ಫಲಿತಾಂಶದಲ್ಲಿ ಈ ಅಂಶ ರುಜುವಾತಾಗಿದೆ ಎಂದರು. ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆಯಿದೆ ಎಂದು ಕೃಷ್ಣ ಹೇಳಿದರು.

ಮಾಧ್ಯಮ ಕೇಂದ್ರದಲ್ಲಿನ ಅನುಕೂಲತೆಗಳ ಕುರಿತು ವಾರ್ತಾ ಇಲಾಖೆಯ ಆಯುಕ್ತ ಐ.ಎಂ.ವಿಠ್ಠಲಮೂರ್ತಿ ಮುಖ್ಯಮಂತ್ರಿ ಕೃಷ್ಣರಿಗೆ ಮಾಹಿತಿ ನೀಡಿದರು.

ಕಳೆದ ಏಪ್ರಿಲ್‌ 20 ಹಾಗೂ 26ರಂದು ನಡೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಮತ ಎಣಿಕೆ ಗುರುವಾರ (ಮೇ 13) ನಡೆಯಲಿದೆ.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+