ಮಹಿಳಾ ಪೊಲೀಸ್ ಬೆಂಗಾವಲಲ್ಲಿ ರೌಡಿ ತನ್ವೀರ್ ಅಹ್ಮದ್ ಪೆರೇಡ್
ಮಹಿಳಾ ಪೊಲೀಸ್ ಬೆಂಗಾವಲಲ್ಲಿ ರೌಡಿ ತನ್ವೀರ್ ಅಹ್ಮದ್ ಪೆರೇಡ್
ಶಿವಾಜಿನಗರದ ಭೂಗತ ಲೋಕಕ್ಕೆ ಪೊಲೀಸರಿಂದ ಭಾರೀ ಪೆಟ್ಟು
ಮಹಿಳಾ ಪೊಲೀಸರ ಬೆಂಗಾವಲಲ್ಲಿ ತನ್ವೀರ್ ಅಹ್ಮದ್ ತಲೆ ತಗ್ಗಿಸಿಕೊಂಡು ರಸ್ತೆಗಳಲ್ಲಿ ನಡೆಯುತ್ತಿದ್ದ . ಭಯ, ಅವಮಾನ, ಮೂದಲಿಕೆಗಳಿಂದ ಆತ ಕುಗ್ಗಿಹೋಗಿದ್ದ . ರಸ್ತೆಯಿಕ್ಕೆಲಗಳಲ್ಲೂ ತನ್ವೀರ್‌ನನ್ನು ನೋಡಲು ನೆರೆದಿದ್ದ ಜನರು, ಆತನ ಕುರಿತು ತಮಾಷೆ, ವ್ಯಂಗ್ಯದ ಮಾತಾಡುತ್ತಿದ್ದರು. ಬಂಧನಕ್ಕೂ ಮುನ್ನ ತನ್ವೀರ್ ಕುರಿತು ಇದೇ ಜನ ಭಯಭೀತರಾಗಿದ್ದರು.
ಜನರಲ್ಲಿ ಧೈರ್ಯ-ಜಾಗೃತಿ ಹೆಚ್ಚಿಸುವುದು ಹಾಗೂ ಬೆಂಗಳೂರಿನ ಭೂಗತ ಲೋಕಕ್ಕೆ ಎಚ್ಚರಿಕೆ ನೀಡುವುದು ಈ ಪೆರೇಡ್‌ನ ಉದ್ದೇಶ ಎನ್ನಲಾಗಿದೆ. ಆದರೆ, ತನಿಖೆಗಾಗಿ ತನ್ವೀರ್‌ನನ್ನು ನಡೆಸಲಾಯಿತು. ಉತ್ತಮ ರಸ್ತೆಗಳು ಇಲ್ಲದ ಕಾರಣ ಆತನನ್ನು ಕಾಲ್ನಡಿಗೆಯಲ್ಲಿ ಕರೆದೊಯ್ಯುವುದು ಅನಿವಾರ್ಯವಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿ.ಕೆ.ಶಿವರಾಂ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಮೇ8ರ ಶನಿವಾರ ರಾತ್ರಿ ತನ್ವೀರ್‌ನನ್ನು ಬಂಧಿಸಿತ್ತು . ಮೇ 17ರವರೆಗೆ ತನ್ವೀರ್‌ನನ್ನು ಎಂಟನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ತನ್ವೀರ್‌ನ ಇತರ ಸಹಚರರ ಬಂಧನಕ್ಕೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications