ರಂಗಶಂಕರದಲ್ಲಿ ಮಾವಿನ ಹಣ್ಣೇ ಟೀ- ಊಟ !
ರಂಗಶಂಕರದಲ್ಲಿ ಮಾವಿನ ಹಣ್ಣೇ ಟೀ- ಊಟ !
ಮೇ 16, ಭಾನುವಾರದ ಈ ಮಾವು ಆಸ್ವಾದಿಸುವ ಕೂಟಕ್ಕೆ ರಂಗಕರ್ಮಿಗಳಿಗೂ, ರಂಗಾಸಕ್ತರಿಗೂ ಮುಕ್ತ ಆಹ್ವಾನ.
ಊಟಕ್ಕೂ ಮಾವು, ಚಹಾದ ಜೊತೆಗೂ ಮಾವು. ಈ ವೈವಿಧ್ಯಮಯ ಮಾವಿನಹಣ್ಣಿನ ಕೂಟಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಯಾವುದಾದರೊಂದು ಜಾತಿಯ ಒಂದು ಕಿಲೋ ಮಾವಿನ ಹಣ್ಣನ್ನು ತರತಕ್ಕದ್ದು. ಭಾಗವಹಿಸಿದವರು ಎಷ್ಟು ಬೇಕಾದರೂ ಮಾವಿನಹಣ್ಣು ತಿನ್ನಬಹುದು. ನಿಮ್ಮದೇ ಕೈ; ನಿಮ್ಮದೇ ಬಾಯಿ. ಯಾವುದೇ ತರಹದ ಇತಿಮಿತಿಗಳಿಲ್ಲ. ಮಾವಿನ ಹಣ್ಣನ್ನು ಸವಿಯುತ್ತ ನಿಮಗನಿಸಿದ ವಿಚಾರದ ಚರ್ಚೆ, ಹರಟೆಗಳಿಗೆ ಸಂಪೂರ್ಣ ಅವಕಾಶವಿದೆ.
ವಿವರಗಳನ್ನು ನೆನಪಿಡಿ :
ಸ್ಥಳ: ರಂಗ ಶಂಕರ, ನಂ. 36/2,
8 ನೇ ಅಡ್ಡರಸ್ತೆ,
ಜೆ.ಪಿ. ನಗರ,
ಬೆಂಗಳೂರು-78
ದಿನಾಂಕ: 16 ಮೇ ಭಾನುವಾರ 2004
ಸಮಯ: ಬೆಳಿಗ್ಗೆ 11.00 ರಿಂದ ಸಂಜೆ 5.00 ರವರೆಗೆ
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications