ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಂತ್ರಲೋಕಸಭೆ ಪ್ರತಿಪಾದಿಸಿದ ‘ಮತದಾನೋತ್ತರ ಸಮೀಕ್ಷೆಗಳು’

By Staff
|
Google Oneindia Kannada News

ಅತಂತ್ರಲೋಕಸಭೆ ಪ್ರತಿಪಾದಿಸಿದ ‘ಮತದಾನೋತ್ತರ ಸಮೀಕ್ಷೆಗಳು’
ಬ್ರಹ್ಮ ರಹಸ್ಯ : ಮುಂದಿನ ಪ್ರಧಾನಿ ಯಾರು?

ನವದೆಹಲಿ : ಹದಿನಾಲ್ಕನೇ ಲೋಕಸಭೆಗೆ ದೇಶದಾದ್ಯಂತ ಎಲ್ಲಾ ಹಂತಗಳ ಮತದಾನ ಪೂರ್ಣಗೊಂಡಿದೆ. ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಸರಳಬಹುಮತ ಪಡೆಯಲು ಹೆಣಗಾಡಬೇಕಾಗಿದೆ ಎಂದು ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ.

ಹಿಂದಿನ ಲೋಕಸಭೆಯಲ್ಲಿ ಹೊಂದಿದ ಸ್ಥಾನಗಳ ಪೈಕಿ ಎನ್‌ಡಿಎ ಕುಸಿತ ಕಂಡರೆ, ಕಾಂಗ್ರೆಸ್‌ ಚೇತರಿಸಿಕೊಳ್ಳಲಿದೆ. ಹಿಂದೆ ತೃತಿಯ ರಂಗದಲ್ಲಿ ಇದ್ದ ಪ್ರಮುಖ ಪ್ರಾಂತೀಯ ಪಕ್ಷಗಳು ಸರಕಾರ ರಚನೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ.

ಕಾಂಗ್ರೆಸ್‌ ಈಗಾಗಲೇ ಸೋನಿಯಾ ಗಾಂಧಿಯನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ಯಾದವ್‌, ಎನ್‌ಸಿಪಿಯ ಶರದ್‌ ಪವಾರ್‌, ಆರ್‌ಜೆಡಿಯ ಲಾಲೂ ಪ್ರಸಾದ್‌ ಯಾದವ್‌ ಸಿಪಿಎಮ್‌ನ ಜ್ಯೋತಿ ಬಸು ಪ್ರಧಾನಿ ಪದವಿಯ ಕನಸು ಕಾಣುತ್ತಿರುವ ಇತರ ಪ್ರಮುಖ ಹುರಿಯಾಳುಗಳು. ಮತದಾನೋತ್ತರ ಸಮೀಕ್ಷೆಯ ಪ್ರಕಾರ ಮತ್ತೊಮ್ಮೆ ಅತಂತ್ರ ಲೋಕಸಭೆ ನಿರೀಕ್ಷಿಸಲಾಗಿದೆ.

ಮತದಾನೋತ್ತರ ಸಮೀಕ್ಷಾ ವರದಿಗಳು

ಎನ್‌ಡಿಎ ಮೈತ್ರಿ ಕೂಟ ಕಾಂಗ್ರೆಸ್‌ ಮೈತ್ರಿ ಕೂಟ ಇತರ ಪಕ್ಷಗಳು ಆಜ್‌ತಕ್‌ 248 190 105 ರಿkುೕ ನ್ಯೂಸ್‌ 249 176 117 ಸಹರಾ 263-278 171-181 92-102 ಸ್ಯಾರ್‌ ನ್ಯೂಸ್‌ 263-275 174-186 86-98
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X