ಒಲಿಯದ ಯುವಕನ ಬೆಂಕಿ ಹಚ್ಚಿ ಕೊಲೆಮಾಡಿದ ಎಸ್‌ಟಿಡಿ ಸುಂದರಿ

ಒಲಿಯದ ಯುವಕನ ಬೆಂಕಿ ಹಚ್ಚಿ ಕೊಲೆಮಾಡಿದ ಎಸ್‌ಟಿಡಿ ಸುಂದರಿ
ದುರಂತ ಪ್ರೇಮ ಸೇಡಿಗೆ ತಿರುಗಿದ ಕಥೆ

ಅಲಿಬಾಗ್‌ : ಆ್ಯಸಿಡ್‌ ಎರಚಾಟದ ಕುಕೃತ್ಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ವಿಭಿನ್ನ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನ ಪ್ರೀತಿಗೆ ಪ್ರತಿಕ್ರಿಯೆ ತೋರದ ಯುವಕನನ್ನು ಯುವತಿಯಾಬ್ಬಳು ಪೆಟ್ರೋಲ್‌ ಹಾಕಿ ಸುಟ್ಟಿದ್ದಾಳೆ. ಇಲ್ಲಿಗೆ ಸಮೀಪದ ಮುರಾದಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ. ಎಲ್ಲೆಡೆ ಯುವಕರು ಕುಕೃತ್ಯ ಕೈಗೊಂಡರೆ ಇಲ್ಲಿ ಯುವತಿ ಆರೋಪಿಯಾಗಿದ್ದಾಳೆ.

ಆರೋಪಿ, 24ರ ಹರೆಯದ ಯುವತಿ. ಈಕೆ ನತದೃಷ್ಟ ನೀಲೇಶ್‌ ಮೋಹನ್‌ನ ತಂದೆಯ ಎಸ್‌ಟಿಡಿ ಬೂತಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಈ ಹಿಂದೆ ನೀಲೇಶ್‌ಗೆ ತನ್ನ ಪ್ರೇಮ ವಾಂಛೆಯನ್ನು ತಿಳಿಯಪಡಿಸಿದ್ದಳು. ಆತ ಆಕೆಯನ್ನು ಸಂಪೂರ್ಣವಾಗಿ ನಿರಾಕರಿಸಿದ. ಅಲ್ಲದೆ ಇದೇ ತಿಂಗಳಲ್ಲಿ (ಮೇ 23) ಆತನಿಗೆ ಮದುವೆ ಕೂಡಾ ನಿಗದಿ ಆಗಿತ್ತು .

ತನ್ನ ಪ್ರೀತಿ ಫಲಪ್ರದ ಆಗುತ್ತಿಲ್ಲ ಎಂದು ಆಕೆಗೆ ಅರಿವಾಗತೊಡಗಿತು. ಇದರಿಂದ ನೊಂದ ಆಕೆ ಹೀನ ಕೃತ್ಯಕ್ಕೆ ನಿರ್ಧರಿಸಿಯೇ ಬಿಟ್ಟಳು. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟ ಆಕೆ ನೀಲೇಶ್‌ಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾಳೆ. ಅಲ್ಲದೆ ತಾನು ಸಹ ಪೆಟ್ರೋಲ್‌ ಹಾಕಿ ಸುಟ್ಟುಕೊಂಡಿದ್ದಾಳೆ.

ತೀವ್ರ ಸುಟ್ಟಗಾಯಗಳೊಂದಿಗೆ ನೀಲೇಶ್‌ ಆಸ್ಪತ್ರೆಗೆ ಧಾವಿಸಿದರೂ ಪ್ರಯೋಜನವಾಗಿಲ್ಲ . ಕರಕಲಾಗಿದ್ದ ಆತ ನಡೆದ ಘಟನೆ ತಿಳಿಸಿದನಾದರೂ ತುಂಬಾ ಹೊತ್ತು ಬದುಕಲಿಲ್ಲ. ಅರೆಬರೆ ಸುಟ್ಟಗಾಯಗಳೊಂದಿಗೆ ಯುವತಿ ಜೀವಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+