Get Updates
Get notified of breaking news, exclusive insights, and must-see stories!

ಹೃದಯ-ಸ್ನೇಹಕಸಿ; ಪಾಕ್‌ನಲ್ಲಿ ನಾರಾಯಣ ಹೃದಯಾಲಯ ಜಾಲ

ಹೃದಯ-ಸ್ನೇಹಕಸಿ; ಪಾಕ್‌ನಲ್ಲಿ ನಾರಾಯಣ ಹೃದಯಾಲಯ ಜಾಲ
2000 ಹಾಸಿಗೆ ಸಾಮರ್ಥ್ಯದ ಹೆಲ್ತ್‌ ಸಿಟಿ ನಿರ್ಮಿಸಲು ಡಾ.ದೇವಿಶೆಟ್ಟಿ ಯೋಜನೆ

ಬೆಂಗಳೂರು : ಹೃದಯ ಕಸಿಯಾಂದಿಗೆ ಸ್ನೇಹ ಕಸಿಯಲ್ಲಿಯೂ ತೊಡಗಿರುವ ಸಿಲಿಕಾನ್‌ ವ್ಯಾಲಿಯ ಪ್ರತಿಷ್ಠಿತ ನಾರಾಯಣ ಹೃದಯಾಲಯ ಇದೀಗ ಪಾಕಿಸ್ತಾನದಲ್ಲಿ ತಪಾಸಣಾ ಕೇಂದ್ರವೊಂದನ್ನು ಪ್ರಾರಂಭಿಸಲು ಮುಂದಾಗಿದೆ.

ಟೆಲಿಮೆಡಿಸಿನ್‌ ಸಂಪರ್ಕದ ಮೂಲಕ ತಪಾಸಣೆ ನಡೆಸುವ ಕೇಂದ್ರವನ್ನು ಇನ್ನೊಂದು ತಿಂಗಳಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಪ್ರಾರಂಭಿಸಲಾಗುವುದು ಎಂದು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿಪ್ರಸಾದ್‌ ಶೆಟ್ಟಿ ಶನಿವಾರ (ಮೇ8) ಸುದ್ದಿಗಾರರಿಗೆ ತಿಳಿಸಿದರು. ಈ ಕುರಿತು ಕರಾಚಿಯ ಕೆಲವು ವೈದ್ಯರು ನಾರಾಯಣ ಹೃದಯಾಲಯವನ್ನು ಸಂಪರ್ಕಿಸಿದ್ದಾರೆ. ಐಎಸ್‌ಡಿಎನ್‌ ಲಿಂಕ್‌ ಮೂಲಕ ಪಾಕ್‌ನಲ್ಲಿನ ಹೃದ್ರೋಗಿಗಳಿಗೆ ಸಲಹೆ ನೀಡಲಾಗುವುದು ಎಂದು ಡಾ.ದೇವಿಶೆಟ್ಟಿ ಹೇಳಿದರು.

ಪಾಕಿಸ್ತಾನದ ಎರಡೂವರೆ ವರ್ಷದ ಪುಟಾಣಿ ನೂರ್‌ ಫಾತಿಮಾಳಿಗೆ ಹೃದಯ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ನಾರಾಯಣ ಹೃದಯಾಲಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು . ಜುಲೈ 2003 ರಲ್ಲಿ ಪ್ರಾರಂಭವಾದ ದೋಸ್ತಿ ಬಸ್‌ನಲ್ಲಿ ನೂರ್‌ ಫಾತಿಮಾ ಭಾರತಕ್ಕೆ ಚಿಕಿತ್ಸೆಗಾಗಿ ಆಗಮಿಸಿದ್ದಳು.

ಮಾಲ್ಡೀವ್ಸ್‌ , ಮಲೇಷಿಯಾ ಸೇರಿದಂತೆ ಒಟ್ಟು 22 ಟೆಲಿ ಮೆಡಿಸಿನ್‌ ಸೆಂಟರ್‌ಗಳನ್ನು ಹೊಂದಿರುವ ನಾರಾಯಣ ಹೃದಯಾಲಯ ಭಾರತದ ಪ್ರತಿಷ್ಠಿತ ಹೃದಯ ಚಿಕಿತ್ಸಾ ಕೇಂದ್ರಗಳಲ್ಲೊಂದಾಗಿದೆ. ಬಾಂಗ್ಲಾ , ಶ್ರೀಲಂಕಾ ಸೇರಿದಂತೆ ವಿದೇಶಗಳಿಂದ ಹೆಚ್ಚಿನ ಹೃದ್ರೋಗಿಗಳು ನಾರಾಯಣ ಹೃದಯಾಲಯಕ್ಕೆ ಬರುತ್ತಿದ್ದಾರೆ. ಇಲ್ಲಿನ ರೋಗಿಗಳಲ್ಲಿ ಶೇ.30 ಮಂದಿ ವಿದೇಶಿಯರಾಗಿದ್ದಾರೆ ಎಂದು ಡಾ.ದೇವಿಶೆಟ್ಟಿ ತಿಳಿಸಿದರು.

ಪ್ರತಿದಿನ 22 ಶಸ್ತ್ರಚಿಕಿತ್ಸೆಗಳನ್ನು ನಡೆಸುವ ನಾರಾಯಣ ಹೃದಯಾಲಯ, ಕಳೆದ ಮೂರು ವರ್ಷಗಳಲ್ಲಿ 9000ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳ ನಡೆಸಿದೆ. ಇಲ್ಲಿ ನಡೆಯುವ ಶಸ್ತ್ರಚಿಕಿತ್ಸೆಗಳಲ್ಲಿ ಪ್ರತಿಶತ 40 ಸರ್ಜರಿಗಳು 12 ವರ್ಷದೊಳಗಿನ ಮಕ್ಕಳದ್ದಾಗಿರುತ್ತದೆ ಎಂದು ಡಾ.ದೇವಿ ಶೆಟ್ಟಿ ಹೇಳಿದರು.

ಹೆಲ್ತ್‌ ಸಿಟಿ : 2000 ಹಾಸಿಗೆಗಳ ಸಾಮರ್ಥ್ಯದ ಹೆಲ್ತ್‌ ಸಿಟಿ ನಿರ್ಮಿಸುವ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯನ್ನು ಡಾ.ದೇವಿಶೆಟ್ಟಿ ಸುದ್ದಿಗಾರರೊಂದಿಗೆ ಹಂಚಿಕೊಂಡರು. 250 ಕೋಟಿ ರುಪಾಯಿ ಈ ಯೋಜನೆ ಒಂದೂವರೆ ವರ್ಷಗಳಲ್ಲಿ ಪೂರೈಸುವ ಉದ್ದೇಶವಿದೆ. ಯೋಜನೆ ಪೂರ್ಣವಾದ ನಂತರ ಜಾಗತಿಕ ಆರೋಗ್ಯ ನಕ್ಷೆಯಲ್ಲಿ ಬೆಂಗಳೂರಿಗೆ ಮಹತ್ವದ ಸ್ಥಾನ ದೊರೆಯಲಿದೆ ಎಂದು ಡಾ.ದೇವಿಪ್ರಸಾದ್‌ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+