ಸುತ್ತೋಲೆ ವಾಪಸ್ಸು ನಿರ್ಧಾರ ಸರಿಯಲ್ಲ -ರಾಜ್ಯಪಾಲರ ವಕಾಲತ್ತು
ಸುತ್ತೋಲೆ ವಾಪಸ್ಸು ನಿರ್ಧಾರ ಸರಿಯಲ್ಲ -ರಾಜ್ಯಪಾಲರ ವಕಾಲತ್ತು
ಸುತ್ತೋಲೆ ರದ್ದಿನಿಂದ ಭಾಷಾಅಲ್ಪಸಂಖ್ಯಾತರ ಹಿತಭಂಗ
ಭಾರತೀಯ ವಿದ್ಯಾಭವನದಲ್ಲಿ ಮೇ 7ರ ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ನಾಲ್ಕು ಭಾಷೆಗಳಲ್ಲಿ ಜಾತಕ ಪಂಚಾಂಗಗಳನ್ನು ಕುರಿತ ಸಿ.ಡಿ.ಯನ್ನು ಬಿಡುಗಡೆ ಮಾಡಿ ರಾಜ್ಯಪಾಲ ಚತುರ್ವೇದಿ ಮಾತನಾಡುತ್ತಿದ್ದರು.
ಸರಕಾರ ಈ ಸುತ್ತೋಲೆಯನ್ನು ವಾಪಸ್ಸು ಪಡೆದಿರುವುದು ಸರಿಯಲ್ಲ. ಇಂತಹ ಅಧಿಸೂಚನೆಗಳನ್ನು ಭಾಷಾ ಅಂಧತ್ವದಿಂದ ವಿರೋಧಿಸಿದರೆ ಭಾಷಾ ಅಲ್ಪ ಸಂಖ್ಯಾತರಿಗೆ ತೀವ್ರ ತೊಂದರೆ ಉಂಟು ಮಾಡಿದಂತಾಗುವುದು ಎಂದು ಚತುರ್ವೇದಿ ಹೇಳಿದರು.
ರಾಜ್ಯಗಳ ಮರುವಿಂಗಡನಾ ಕಾಯ್ದೆಯಲ್ಲಿ ಯಾವುದೇ ರಾಜ್ಯದ ರಾಜ್ಯಭಾಷೆ ಅಲ್ಲದೇ ಭಾಷಾ ಅಲ್ಪಸಂಖ್ಯಾತರು ಇರುವ ಪ್ರದೇಶ ಅಥವಾ ಪ್ರಾಂತ್ಯದಲ್ಲಿ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಯೇ ಆದೇಶ ಹೊರಡಿಸಬೇಕು ಎಂದಿದೆ. ಇದರಿಂದ ಸರಕಾರದ ಕಾರ್ಯಕ್ರಮಗಳು ಜನತೆಗೆ ಅರ್ಥವಾಗುವುದು ಎಂದರು.
ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ ನೆಹರೂ ವಿಜ್ಞಾನ ಬಿಟ್ಟರೆ ಬೇರೆ ಏನನ್ನೂ ನಂಬುತ್ತಿರಲಿಲ್ಲ. ಅಂತಹ ಮನೋವೃತ್ತಿ ಈಗ ಕಾಣುತ್ತಿಲ್ಲ. ಡಾ.ಸಾಹಾ ನೀಡಿದ ದಿನದರ್ಶಿಕೆಯನ್ನು ಎಲ್ಲರೂ ಅನುಸರಿಸುವಂತಾಗಬೇಕು ಎಂದು ಚತುರ್ವೇದಿ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications