ಹಾವೇರಿಯ ಬಂಕಾಪುರ ಸಮೀಪ ಭೀಕರ ಅಪಘಾತ, 8ಮಂದಿ ಸಾವು
ಹಾವೇರಿಯ ಬಂಕಾಪುರ ಸಮೀಪ ಭೀಕರ ಅಪಘಾತ, 8ಮಂದಿ ಸಾವು
ಮೂವರಿಗೆ ಗಾಯ, ಮೃತರ ಪಟ್ಟಿಯಲ್ಲಿ ಮೂವರು ಸ್ತ್ರೀಯರು ಹಾಗೂ ಮೂವರು ಮಕ್ಕಳು
ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ಸು ಹಾಗೂ ಖಾಸಗಿ ವ್ಯಾನ್ ನಡುವೆ ಸಂಭವಿಸಿದ ಮುಖಾಮುಖಿಯಲ್ಲಿ ಈ ದುರಂತ ಸಂಭವಿಸಿದೆ. ವ್ಯಾನ್‌ನಲ್ಲಿದ್ದ ಎಂಟು ಮಂದಿ ಅಪಘಾತಕ್ಕೆ ಬಲಿಯಾಗಿದ್ದು- ಮೂವರು ಹೆಂಗಸರು ಹಾಗೂ ಮೂವರು ಮಕ್ಕಳು ಮೃತರಾದವರಲ್ಲಿ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಾನ್‌ನಲ್ಲಿದ್ದವರು ಹುಬ್ಬಳ್ಳಿಗೆ ತೆರಳುತ್ತಿದ್ದರು.
ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರು ಅಪಘಾತದಲ್ಲಿ ಗಾಯಗೊಂಡಿದ್ದಾರೆ . ಮಹಾರಾಷ್ಟ್ರದ ಕೊಲ್ಲಾಪುರಿಂದ ಬರುತ್ತಿದ್ದ ಈ ಬಸ್ಸು ಬೆಂಗಳೂರಿಗೆ ಹೊರಟಿತ್ತು . ಮೃತರ ಹೆಸರುಗಳು ತಿಳಿದುಬಂದಿಲ್ಲ .
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications