ಪೋಲಿಯೋವನ್ನು ಆಲ್ ಔಟ್ ಮಾಡಲು ಕರೆ ನೀಡಿದ ಅನಿಲ್ ಕುಂಬ್ಳೆ
ಪೋಲಿಯೋವನ್ನು ಆಲ್ ಔಟ್ ಮಾಡಲು ಕರೆ ನೀಡಿದ ಅನಿಲ್ ಕುಂಬ್ಳೆ
ಮೇ.09ರ ಆದಿತ್ಯವಾರ ರಾಜ್ಯಾದ್ಯಂತ ಪೋಲಿಯೋ ಲಸಿಕೆ
ಅವರು ಮೇ.06ರ ಗುರುವಾರ ಯುನಿಸೆಫ್ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕೊನೆಯ ವೈರಸ್ ಔಟಾಗುವ ತನಕ ನಾವು ಈ ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ರೋಗ ಶೂನ್ಯವಾಗುವ ತನಕ ನಮ್ಮ ಹೋರಾಟ ನಿಲ್ಲಲಾರದು ಎಂದು ಹೇಳಿದರು.
ಮೇ.09ರಂದು ಕರ್ನಾಟಕ ಮತ್ತು ಆಂಧ್ರಪ್ರದೇಶದ ಎಲ್ಲೆಡೆ ಪೋಲಿಯೋ ಲಸಿಕೆ ಹಾಕಲಾಗುವುದು. ಅಂದು ಕೇಂದ್ರಕ್ಕೆ ತೆರಳಿ ನನ್ನ ಮಗುವಿಗೂ ಲಸಿಕೆ ಹಾಕಿಸುತ್ತೇನೆ ಎಂದು ಹೇಳಿದರು.
ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಕುಂಬ್ಳೆ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅವರು ಕನ್ನಡದ ಕಣ್ಮಣಿ ರಾಜ್‌ಕುಮಾರ್‌ಮತ್ತು ತೆಲುಗು ನಟ ಚಿರಂಜೀವಿ ಅವರ ಪೋಲಿಯಾ ಕುರಿತಾದ ಧ್ವನಿ-ಚಿತ್ರ ಮುದ್ರಿಕೆಯನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಯುನಿಸೆಫ್‌ನ ಕರ್ನಾಟಕ-ಆಂಧ್ರ ಪ್ರತಿನಿಧಿ ಲಿಯಾನಾರ್ಡೋ ಡಿ ವೋಸ್ 1998ರಲ್ಲಿ ಭಾರತದಲ್ಲಿ 1,934ಪೋಲಿಯೋ ಪೀಡಿತರು ಇದ್ದರು. ಕಳೆದ ವರ್ಷಅವರ ಸಂಖ್ಯೆ 225ಕ್ಕೆ ಇಳಿದಿದೆ. ಕಳೆದ ವರ್ಷ 36 ಪೀಡಿತ ವ್ಯಕ್ತಿಗಳಿದ್ದ ಕರ್ನಾಟಕದಲ್ಲಿ ಈಗ ಕೇವಲ ಎಂಟು ಮಂದಿ ಇದ್ದಾರೆ ಎಂದು ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications