ಮುಖ್ಯಮಂತ್ರಿಎಸ್ಸೆಂ.ಕೃಷ್ಣ ಚುನಾವಣೆ ನಂತರ ಏನು ಮಾಡುತ್ತಿದ್ದಾರೆ ?

ಮುಖ್ಯಮಂತ್ರಿಎಸ್ಸೆಂ.ಕೃಷ್ಣ ಚುನಾವಣೆ ನಂತರ ಏನು ಮಾಡುತ್ತಿದ್ದಾರೆ ?
ಪಾಪ ಕೃಷ್ಣ ! ಗೃಹಕೃತ್ಯಗಳೊಂದಿಗೆ ನೆರೆಮನೆ ಜವಾಬ್ದಾರಿಯೂ ಹೆಗಲಿಗೆ !

ಬೆಂಗಳೂರು : ಇತರ ಪಕ್ಷಗಳ ನಾಯಕರುಗಳು ಚುನಾವಣೆ ಬಳಲಿಕೆಯ ನಂತರ ನಿದ್ದೆ, ಜಿಂದಾಲ್‌, ಸಿನಿಮಾ, ಮದುವೆ-ಮುಂಜಿ, ತೀರ್ಥಯಾತ್ರೆ ಎಂದು ಓಡಾಡುತ್ತಿರುವಾಗ ಕೃಷ್ಣ ಏನು ಮಾಡುತ್ತಿದ್ದಾರೆ ?

ಕೃಷ್ಣ ಕೂಡ ಚುನಾವಣೆಯಿಂದ ಬಳಲಿದ್ದಾರೆ. ಆದರೆ ಅವರಿಗೆ ರಾಜ್ಯದ ಇತರ ಪಕ್ಷಗಳ ನಾಯಕರಂತೆ ವಿಶ್ರಾಂತಿ ಪಡೆಯುವ ಯೋಗವಿಲ್ಲ . ನೆರೆಹೊರೆ ರಾಜ್ಯಗಳ ಚುನಾವಣಾ ಪ್ರಚಾರದಲ್ಲೂ ಕೃಷ್ಣ ತೊಡಗಿಕೊಳ್ಳಬೇಕಾಗಿದೆ. ದಕ್ಷಿಣಭಾರತದ ಅತ್ಯಂತ ಪ್ರಭಾವಿ ಕಾಂಗ್ರೆಸ್‌ ನಾಯಕರಾದ ಕಾರಣ ಕೃಷ್ಣ ಇನ್ನಷ್ಟು ಕಾಲ ನಿದ್ದೆ ಕೆಡಲೇಬೇಕಾಗಿದೆ.

ಮೇ 5ರ ಬುಧವಾರ ಚುನಾವಣಾ ಪ್ರಚಾರಕ್ಕೆಂದು ಕೃಷ್ಣ ಕೇರಳಕ್ಕೆ ತೆರಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಕೃಷ್ಣ ಪ್ರಚಾರ ಮಾಡುವರು. ಕಲಿತವರ ರಾಜ್ಯವಾದ ಕೇರಳದಲ್ಲಿ ಹೈಟೆಕ್‌ ಮುಖ್ಯಮಂತ್ರಿ ಕೃಷ್ಣ ಜನಪ್ರಿಯತೆ ಹೊಂದಿದ್ದಾರೆ. ಚುನಾವಣಾ ಪ್ರಚಾರದ ನಂತರ ಕೃಷ್ಣ ಶುಕ್ರವಾರ ಬೆಂಗಳೂರಿಗೆ ವಾಪಸ್ಸಾಗುವರು.

ಅಂದಹಾಗೆ, ಚುನಾವಣೆಯ ನಂತರ ಕೃಷ್ಣ ದೇವಸ್ಥಾನಗಳಿಗೆ ಎಡತಾಕಲಿಲ್ಲವಾ ? ಯಾಕಿಲ್ಲ . ಮಲೆ ಮಹದೇಶ್ವರ, ತಿರುಪತಿ ಮುಂತಾಗಿ ಕೃಷ್ಣ ಹೋಗಿಬಂದಿದ್ದಾರೆ. ಉಳಿದ ದೇವರುಗಳನ್ನು ಪ್ರೇಮಾ ಕೃಷ್ಣ ವಿಚಾರಿಸಿಕೊಳ್ಳುತ್ತಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+