ಮಳೆ ಬಂತು ಮಳೆ ! ಕೃಷಿ ಕನಸುಗಳ ಬಿತ್ತನೇಲಿ ಮೈಸೂರು ಜಿಲ್ಲೆ ರೈತರು
ಮಳೆ ಬಂತು ಮಳೆ ! ಕೃಷಿ ಕನಸುಗಳ ಬಿತ್ತನೇಲಿ ಮೈಸೂರು ಜಿಲ್ಲೆ ರೈತರು
ಮೈಸೂರು ಜಿಲ್ಲೆಯ ಎಲ್ಲ 8 ತಾಲ್ಲೂಕುಗಳಲ್ಲೂ ಉತ್ತಮ ಮಳೆ
ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಕಳೆದ ಮೂರು ವರ್ಷಗಳ ಸತತ ಬರದಿಂದ ಕಂಗೆಟ್ಟಿದ್ದ ರೈತರು ಮಾನ್ಸೂನ್ ಮುನ್ನಾ ಮಳೆಯಿಂದ ಉತ್ಸಾಹಿತರಾಗಿದ್ದು , ಮುಂಗಾರಿನ ಬಗೆಗೂ ಆಶಾಭಾವನೆ ತಳೆದಿದ್ದಾರೆ.
ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಮೈಸೂರು ಜಿಲ್ಲೆಯಲ್ಲಿ 65.9 ಮಿ.ಮಿ. ಮಳೆ ಸುರಿಯುವುದು ವಾಡಿಕೆ. ಆದರೆ ಈ ಬಾರಿ 98.3 ಮಿ.ಮಿ. ಮಳೆ ಸುರಿದಿದೆ. 2003 ರಲ್ಲಿ ಕೇವಲ 61.1 ಮಿ.ಮಿ. ಮಳೆ ಸುರಿದಿತ್ತು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಆರ್.ಕೃಷ್ಣಯ್ಯ ತಿಳಿಸಿದ್ದಾರೆ. ಪ್ರಸಕ್ತ ವರ್ಷದ ಜನವರಿಯಿಂದ ಏಪ್ರಿಲ್‌ವರೆಗೆ ಮೈಸೂರು ಜಿಲ್ಲೆಯಲ್ಲಿ 107.03 ಮಿ.ಮಿ. ಮಳೆ ಸುರಿದಿದೆ. ಕಳೆದ ವರ್ಷ ಈ ಪ್ರಮಾಣ 58.4 ಮಿ.ಮಿ. ಮಳೆಯಾಗಿತ್ತು .
ಮೈಸೂರು ಜಿಲ್ಲೆಯ ಎಲ್ಲ 8 ತಾಲ್ಲೂಕುಗಳಲ್ಲೂ ಉತ್ತಮ ಮಳೆಯಾಗಿದೆ. ಉತ್ತಮ ಮಳೆಯಿಂದಾಗಿ ಹೆಗ್ಗಡದೇವನಕೋಟೆ, ಹುಣಸೂರು, ಕೆ.ಆರ್.ನಗರ ಮುಂತಾದೆಡೆಗಳ ರೈತರು ಕೃಷಿ ಕಾರ್ಯಗಳಲ್ಲಿ ತೊಡಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications