ಜೀವ ಬೆದರಿಕೆ ! ಹೈಗ್ರೌಂಡ್ಸ್ ಠಾಣೆಯಲ್ಲಿ ಡಿ.ಕೆ.ಶಿವಕುಮಾರ್ ದೂರು
ಜೀವ ಬೆದರಿಕೆ ! ಹೈಗ್ರೌಂಡ್ಸ್ ಠಾಣೆಯಲ್ಲಿ ಡಿ.ಕೆ.ಶಿವಕುಮಾರ್ ದೂರು
ಬಿಎಸ್‌ಪಿ ಅಭ್ಯರ್ಥಿ ಮುನಿಯಪ್ಪ ವಿರುದ್ಧ ದೂರು ದಾಖಲು
ಈಗಾಗಲೇ ಚುನಾವಣೆಯಲ್ಲಿ ಸೋಲು ಖಚಿತವೆಂದು ಮುನಿಯಪ್ಪನವರಿಗೆ ಅರಿವಾಗಿದೆ. ಚುನಾವಣೆಯಲ್ಲಿ ಲಕ್ಷಗಟ್ಟಲೆ ದುಡ್ಡು ಕಳೆದುಕೊಂಡು ಸಾಲಗಾರನಾಗಿದ್ದು , ಈಗ ನನ್ನಲ್ಲಿ ಈಗ ಹಣ ನೀಡುವಂತೆ ಬೆದರಿಸುತ್ತಿದ್ದಾನೆ ಎಂದು ನಗರದ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ಶಿವಕುಮಾರ್ ಆಪಾದಿಸಿದ್ದಾರೆ.
ಇಷ್ಟಲ್ಲದೇ, ನಾನು ಆತನಿಗೆ ಹಣ ನೀಡದಿದ್ದ ಪಕ್ಷದಲ್ಲಿ ಜಾತಿ ನಿಂದನೆ ಆರೋಪ ಹೊರಿಸುವುದಾಗಿಯೂ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದಾನೆ. ಕೊನೆಯ ಹಂತವಾಗಿ ನನ್ನ ಮತ್ತು ಕುಟುಂಬದವರ ಮೇಲೆ ಆ್ಯಸಿಡ್ ದಾಳಿ ನಡೆಸುವುದಾಗಿ ಹೇಳಿದ್ದಾನೆ. ತನಗೆ ದೇವೇಗೌಡ, ಸಿಂಧ್ಯಾ ಮತ್ತು ಆತನ ಜಾತಿಯವರ ಬೆಂಬಲವಿರುವುದಾಗಿ ಮುನಿಯಪ್ಪ ಹೇಳಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications