ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಾಪಾಪಾಪಿ ತೆಲಗಿ ಕಾಂಗ್ರೆಸ್‌ ಕಾರ್ಯಕರ್ತ: ವಾಜಪೇಯಿ ಆರೋಪ

By Staff
|
Google Oneindia Kannada News

ಛಾಪಾಪಾಪಿ ತೆಲಗಿ ಕಾಂಗ್ರೆಸ್‌ ಕಾರ್ಯಕರ್ತ: ವಾಜಪೇಯಿ ಆರೋಪ
ಸರ್ಕಾರ ನಡೆಸುವುದೆಂದರೆ ಮಕ್ಕಳಾಟವಲ್ಲ , ಸೋನಿಯಾಗೆ ಅಟಲ್‌ ಕೀಟಲೆ

ಖಜುರಾಹೊ : ಬಹುಕೋಟಿ ಛಾಪಾ ಪಾಪದ ಪ್ರಮುಖ ಆರೋಪಿ ಕರೀಂ ಲಾಲ ತೆಲಗಿ ಕಾಂಗ್ರೆಸ್‌ ಕಾರ್ಯಕರ್ತ ಎಂದು ಪ್ರಧಾನಿ ವಾಜಪೇಯಿ ಆರೋಪಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸ್‌ ಹಾಗೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಗಳ ಪರಸ್ಪರ ಕೆಸರು ಎರಚಿಕೊಳ್ಳುವ ಪೈಪೋಟಿ ತಾರಕಕ್ಕೇರಿದಂತಾಗಿದೆ.

ಭ್ರಷ್ಟಾಚಾರವನ್ನು ಕಾಂಗ್ರೆಸ್‌ ಬೆಳೆಸಿತು ಎಂದು ಪ್ರಧಾನಿ ವಾಜಪೇಯಿ ಬಣ್ಣಿಸಿದರು. ಇದಕ್ಕೆ ಉದಾಹರಣೆಯಾಗಿ ಛಾಪಾ ಪಾಪಿ ತೆಲಗಿಯನ್ನು ಉದಾಹರಿಸಿದ ವಾಜಪೇಯಿ- ಕಾಂಗ್ರೆಸ್‌ ಕಾರ್ಯಕರ್ತನಾದ ತೆಲಗಿ ಪ್ರಸ್ತುತ ಜೈಲಿನಲ್ಲಿದ್ದಾನೆ ಎಂದರು. ಅವರು ಮೇ3ರಂದು ಮಧ್ಯಪ್ರದೇಶದ ಖಜುರಾಹೊದಲ್ಲಿ ನಡೆದ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡುತ್ತಿದ್ದರು.

ಎನ್‌ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಧಾನಿ, ಗಾಜಿನ ಮನೆಯಲ್ಲಿ ಇರುವವರು ಇತರರ ಮೇಲೆ ಕಲ್ಲು ತೂರಬಾರದು ಎಂದರು.

ಭ್ರಷ್ಟಾಚಾರ ಒಂದು ಸಾಮಾಜಿಕ ಸಮಸ್ಯೆಯಾಗಿದ್ದು , ಇದರ ವಿರುದ್ಧ ಸಂಘಟಿತ ಹೋರಾಟ ಅವಶ್ಯಕವಾಗಿದೆ. ಆದರೆ, ಈ ಹೋರಾಟ ಅನನುಭವಿ ಸೋನಿಯಾಗಾಂಧಿ ಅವರಿಂದ ಅಸಾಧ್ಯ. ಸರ್ಕಾರವನ್ನು ನಡೆಸುವುದೆಂದರೆ ಮಕ್ಕಳಾಟವಲ್ಲ . ಒಂದು ಸಣ್ಣ ತಪ್ಪು ಕೂಡ ದೇಶ ಹಾಗೂ 100 ಕೋಟಿ ಜನತೆಯನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಮೇ 5ರಂದು ನಡೆಯುವ ಮೂರನೇ ಹಂತದ ಚುನಾವಣೆಯಲ್ಲಿ ಮಧ್ಯಪ್ರದೇಶದ 12 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.

(ಪಿಟಿಐ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X