ರಾಜ್ಯದೆಲ್ಲೆಡೆ ಧಾರಾಕಾರ ಮಳೆ: ಗೋಡೆ-ಛಾವಣಿ ಕುಸಿದು ಏಳು ಸಾವು
ರಾಜ್ಯದೆಲ್ಲೆಡೆ ಧಾರಾಕಾರ ಮಳೆ: ಗೋಡೆ-ಛಾವಣಿ ಕುಸಿದು ಏಳು ಸಾವು
35 ರಿಂದ 25 ಡಿಗ್ರಿಗೆ ಇಳಿದ ಬೆಂಗಳೂರಿನ ತಾಪಮಾನ
ನಗರದಲ್ಲಿ ಮೇ 3ರ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸೂರ್ಯ ನೆತ್ತಿಗೇರುತ್ತಿದ್ದಂತೆ ತುಂತುರು ಸುರಿಯಲು ಆರಂಭಿಸಿದ ಮಳೆ ಮತ್ತೆ ಬಿರುಸಾಗ ತೊಡಗಿತು. ಇದರಿಂದ 35 ಡಿ. ಸಿ. ಇದ್ದ ತಾಪಾಮಾನ ಮುಸ್ಸಂಜೆಯ ಹೊತ್ತಲ್ಲಿ 25 ಡಿ.ಸಿ. ತಲುಪಿದೆ. ಕೆಲವೆಡೆ 9 ಸಿಸಿ ಡಿಗ್ರಿಗೂ ಇಳಿದಿರುವುದು ವರದಿಯಾಗಿದೆ.
ಬೆಂಗಳೂರಿನಲ್ಲಿ ಸೋಮವಾರ 12 ಮಿ.ಮೀ. ಮಳೆಯಾಗಿದೆ. ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ಜನಗಳಿಗೆ, ರಜಾದ ಮಜಾದಲ್ಲಿದ್ದ ಮಕ್ಕಳಿಗೆ ಮಳೆ ತಂಪನ್ನೆರೆದಿದೆ. ಹೊರ ಊರಿನಿಂದ ಕೂಲಿಗಾಗಿ ಬಂದ ಕಾರ್ಮಿಕರು ಮತ್ತು ಕೊಳಚೆ ಪ್ರದೇಶ ವಾಸಿಗಳಿಗೆ ಮಿಶ್ರ ಅನುಭವ. ಒಂದೆಡೆ ಮಳೆ ತಂಪು ತಂಪಿತ್ತರೆ, ಇನ್ನೊಂದೆಡೆ ಸೂರು ಸೋರುತ್ತಿತ್ತು. ಅದು ಆಗಾಗ ಗಾಳಿಗೆ ಹಾರುತ್ತಿತ್ತು.
ಮಂಗಳೂರು
ಮಂಗಳೂರಿನಲ್ಲಿ ಮಳೆ ಧಾರಾಕಾರವಾಗಿ ಸುರಿದ ಕಾರಣ ನೆಹರೂ ಮೈದಾನ ಆವರಣದ ಗೋಡೆ ಕುಸಿದು ಮೂವರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮಳೆ ನೀರು ಹಾದುಹೋಗಲು ಜಾಗವಿಲ್ಲದ ಕಾರಣ ಮನೆಯಾಳಗೆ ನೀರು ನುಗ್ಗಿದೆ. ಇದರಿಂದ ಶಿಥಿಲಗೊಂಡ ಗೋಡೆ ಕುಸಿದಿದೆ ಎಂದು ಹೇಳಲಾಗಿದೆ.
ಮುಳಬಾಗಲು
ಇಲ್ಲಿಯ ಪಟ್ಟಣದ ಮತ್ಯಾಲ ಪೇಟೆಯ ಭಗತ್‌ಸಿಂಗ್ ರಸ್ತೆಯ ಮನೆಯಾಂದರ ಛಾವಣಿ ಕುಸಿದು ಬಿದ್ದು ಮಲಗಿದ್ದ ನಾಲ್ವರು ಮೃತಪಟ್ಟಿದ್ದಾರೆ. ಮನೆ ಛಾವಣಿ ಕಲ್ಲಿನದ್ದಾಗಿತ್ತು. ಮಳೆ ಬಂದಾಗ ಗೋಡೆ ಛಾವಣಿಯ ಭಾರ ತಾಳಲಾರದೆ ಕುಸಿದಿದೆ.
ಬಂಗಾಳಕೊಲ್ಲಿಯ ವಾಯುವ್ಯ ಭಾಗದಲ್ಲಿ ಉಂಟಾದ ವಾಯುಭಾರ ಕುಸಿತವೇ ಮಳೆಗೆ ಕಾರಣವಾಗಿದೆ. ಮಳೆಯ ಅಬ್ಬರ ರಾಜ್ಯದ ವಿವಿಧೆಡೆಗಳಲ್ಲಿ ಮಂಗಳವಾರವೂ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಡಾ.ಕೊಪ್ಪರ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications