ಬೆಂಗಳೂರಲ್ಲಿ ಪಾಕಿಸ್ತಾನದ ಪ್ರಸಿದ್ಧ ‘ಗಜಲ್ ಮಾಂತ್ರಿಕ’ ಗುಲಾಂ ಆಲಿ
ಬೆಂಗಳೂರಲ್ಲಿ ಪಾಕಿಸ್ತಾನದ ಪ್ರಸಿದ್ಧ ‘ಗಜಲ್ ಮಾಂತ್ರಿಕ’ ಗುಲಾಂ ಆಲಿ
ಸಾಂಸ್ಕೃತಿಕ ವಿನಿಮಯದಿಂದ ಭಾರತ-ಪಾಕ್ ನಡುವಣ ಉದ್ವಿಗ್ನತೆ ಶಮನ
ಉಭಯ ದೇಶಗಳ ಕಲಾವಿದರ ವಿನಿಮಯವೂ ದೊಡ್ಡ ಪ್ರಮಾಣದಲ್ಲಿ ನಡೆಯಬೇಕು. ಹಾಗಾದಾಗ ಎರಡೂ ದೇಶಗಳ ನಡುವೆ ಹಿತಕರ ಭಾವನೆ ಮೂಡಲು ಸಾಧ್ಯವಾಗುತ್ತದೆ ಎಂದು ಗುಲಾಂ ಆಲಿ ಹೇಳಿದರು. ಬೆಂಗಳೂರು ಪ್ರವಾಸದಲ್ಲಿರುವ ಗುಲಾಮ್ ಆಲಿ, ಮೇ 4ರ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಇಸ್ಕಾನ್‌ನ ಕೃಷ್ಣ ದೇಗುಲದಲ್ಲಿ , ಸೌಲಭ್ಯ ವಂಚಿತ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವ ಅಕ್ಷಯ ಪಾತ್ರೆ ಯೋಜನೆಯನ್ನು ಪರಿಶೀಲಿಸಿದ ಗುಲಾಂ ಆಲಿ, ಯೋಜನೆಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಮಕ್ಕಳಿಗೆ ಊಟ ಬಡಿಸಿದರು.
ಏಳು ವರ್ಷಗಳ ನಂತರ ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡುತ್ತಿರುವ ಕುರಿತು ಹರ್ಷ ವ್ಯಕ್ತಪಡಿಸಿದ ಅವರು- ಗಜಲ್ ಪ್ರೇಮಿಗಳು ಗಡಿರೇಖೆಯ ಮೀರಿದ್ದಾರೆ ಎಂದು ಬಣ್ಣಿಸಿದರು. ಭಾರತ ತನಗೆ ಹೊಸದೇನೂ ಅಲ್ಲ . ಕಳೆದ 24 ವರ್ಷಗಳಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ. ಇದೇರೀತಿ ನಾನಾ ದೇಶ ಸುತ್ತಿದ್ದೇನೆ. ಆದರೆ ಭಾರತೀಯರು ತೋರಿದ ಪ್ರೀತಿ-ವಿಶ್ವಾಸ ಅನನ್ಯವಾದದ್ದು ಎಂದು ಆಲಿ ಭಾವುಕರಾಗಿ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications