ಸರ್ವೋಚ್ಛನ್ಯಾಯಮೂರ್ತಿ ಸ್ಥಾನಕ್ಕೆ ರಾಜ್ಯದ ಎಸ್.ರಾಜೇಂದ್ರಬಾಬು
ಸರ್ವೋಚ್ಛನ್ಯಾಯಮೂರ್ತಿ ಸ್ಥಾನಕ್ಕೆ ರಾಜ್ಯದ ಎಸ್.ರಾಜೇಂದ್ರಬಾಬು
ದೇಶದ 34ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕಾರ
ನ್ಯಾಯಮೂರ್ತಿ ರಾಜೇಂದ್ರ ಬಾಬು ದೇಶದ 34ನೇ ಮುಖ್ಯನ್ಯಾಯಮೂರ್ತಿಯಾಗಿದ್ದಾರೆ. ನಿವೃತ್ತಿ ಹೊಂದಿದ ಮುಖ್ಯ ನ್ಯಾಯಮೂರ್ತಿ ವಿ.ಎನ್. ಖರೆ ಅವರ ಸ್ಥಾನದಲ್ಲಿ ಬಾಬು ಕಾರ್ಯನಿರ್ವಹಿಸಲಿದ್ದಾರೆ. ಮುಖ್ಯ ನ್ಯಾಯಮೂರ್ತಿಯಾಗಿ ಖರೆ 16 ತಿಂಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಜೂನ್ 1ರಂದು ನಿವೃತ್ತಿ ಆಗಲಿರುವ ಬಾಬು, ಕೇವಲ 31 ದಿನಗಳ ಕಾಲ ಕರ್ತವ್ಯ ನಿರ್ವಹಿಲಿದ್ದಾರೆ.
1965ರಲ್ಲಿ ತಮ್ಮ ವಕೀಲಿ ವೃತ್ತಿ ಆರಂಭಿಸಿದ ಬಾಬು 1988ರಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ, 1997ರಿಂದ ಸುಪ್ರಿಮ್ ಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಷೇರು ವಿಕ್ರಯ ಮಾಡುವ ಮುನ್ನ ಸಂಸತ್‌ನ ಅನುಮತಿ ಮುಖ್ಯ ಎಂಬ ತೀರ್ಪು ಸೇರಿದಂತೆ ಮಹತ್ವದ ತೀರ್ಪುಗಳನ್ನು ಈ ಹಿಂದೆ ನೀಡಿದ ಗೌರವ ಅವರದಾಗಿದೆ.
ಸಮಾರಂಭದಲ್ಲಿ ಪ್ರಧಾನಿ ವಾಜಪೇಯಿ, ಕಾನೂನು ಸಚಿವ ಅರುಣ್‌ಜೇಟ್ಲಿ, ಸಂಪರ್ಕ ಸಚಿವ ಅರುಣ್‌ಶೌರಿ, ಮನೋಹರ ಜೋಶಿ, ಸುಪ್ರಿಮ್ ಕೋರ್ಟ್ ನ್ಯಾಯ ಮೂರ್ತಿಗಳು ಸೇರಿದಂತೆ ಗಣ್ಯರುಗಳು ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications