ಬಿಜಾಪುರದ ಬಾಯಾರಿಕೆ : ಮಹಾರಾಷ್ಟ್ರಕ್ಕೆ ರಾಜ್ಯದ ರಾಯಭಾರಿಗಳು
ಬಿಜಾಪುರದ ಬಾಯಾರಿಕೆ : ಮಹಾರಾಷ್ಟ್ರಕ್ಕೆ ರಾಜ್ಯದ ರಾಯಭಾರಿಗಳು
ವಿಜಯ್ ಗೋರೆ ನೇತೃತ್ವದಲ್ಲಿ ಮೇ 5ರಂದು ರಾಜ್ಯದ ನಿಯೋಗ
ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ವಿಜಯ್ ಗೋರೆ ಅವರ ನೇತೃತ್ವದಲ್ಲಿ ರಾಜ್ಯದ ನಿಯೋಗ ಮೇ 5ರಂದು ಮಹಾರಾಷ್ಟ್ರಕ್ಕೆ ತೆರಳಲಿದೆ. ಗೋರೆ ಅವರೊಂದಿಗೆ ನೀರಾವರಿ ಕಾರ್ಯದರ್ಶಿ ಚನ್ನಬಸಪ್ಪ ಹಾಗೂ ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಕೂಡ ತೆರಳುವರು ಎಂದು ಅಧಿಕೃತ ಮೂಲಗಳು (ಮೇ 3, ಸೋಮವಾರ) ತಿಳಿಸಿವೆ.
ನೀರು ಬಿಡುಗಡೆ ಕುರಿತಂತೆ ರಾಜ್ಯದ ನಿಯೋಗ ಮಹಾರಾಷ್ಟ್ರದ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಿದೆ. ನೀರು ಬಿಡುಗಡೆ ಸಂಬಂಧ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ , ಮಹಾರಾಷ್ಟ್ರದ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂಧೆ ಅವರೊಂದಿಗೆ ಭಾನುವಾರ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ರಾಜ್ಯಕ್ಕೆ ನೀರು ಬಿಡುಗಡೆ ಮಾಡುವಂತೆ ಶಿಂಧೆ ಅವರನ್ನು ದೂರವಾಣಿ ಸಂಭಾಷಣೆ ಕಾಲದಲ್ಲಿ ಕೃಷ್ಣ ಕೇಳಿದರು ಎಂದು ಮೂಲಗಳು ತಿಳಿಸಿವೆ.
ಈ ಮುನ್ನ , ಕೃಷ್ಣಾ ನದಿಯಿಂದ 1 ಟಿಎಂಸಿ ನೀರನ್ನು ಮಹಾರಾಷ್ಟ್ರ ರಾಜ್ಯಕ್ಕೆ ಬಿಡುಗಡೆ ಮಾಡಿತ್ತು . ಆದರೆ, ಈ ನೀರು ಬರಪೀಡಿತ ಬಿಜಾಪುರ ಜಿಲ್ಲೆಯ ಜನರ ಬಾಯಾರಿಕೆಯನ್ನು ಹಿಂಗಿಸಲು ಸಾಧ್ಯವಾಗಿಲ್ಲ . ಆ ಕಾರಣದಿಂದ ಇನ್ನೂ ಒಂದು ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ರಾಜ್ಯ ಮಹಾರಾಷ್ಟ್ರಕ್ಕೆ ಮೊರೆಯಿಟ್ಟಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications