ಭಟ್ಕಳದಿ ಮತ್ತೆ ಅಬ್ಬರಿಸಿದ ಬಂದೂಕು, ಬಿಜೆಪಿ ನಾಯಕನ ಬರ್ಬರ ಹತ್ಯೆ
ಭಟ್ಕಳದಿ ಮತ್ತೆ ಅಬ್ಬರಿಸಿದ ಬಂದೂಕು, ಬಿಜೆಪಿ ನಾಯಕನ ಬರ್ಬರ ಹತ್ಯೆ
ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಿಜೆಪಿಯ ತಿಮ್ಮಪ್ಪ ನಾಯಕ ಬಲಿ
ಭಟ್ಕಳ ತಾಲ್ಲೂಕು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ತಿಮ್ಮಪ್ಪ ಹೊನ್ನಪ್ಪ ನಾಯಕ ಅವರನ್ನು ಗುರುತು ಸಿಗದ ದುಷ್ಕರ್ಮಿಗಳು ಭಾನುವಾರ ರಾತ್ರಿ (ಮೇ 2) ಗುಂಡಿಟ್ಟು ಕೊಂದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಸ್.ಮುಖರ್ಜಿ ಪಿಟಿಐ ವಾರ್ತಾ ಸಂಸ್ಥೆಗೆ ತಿಳಿಸಿದ್ದಾರೆ.
ದುಷ್ಕರ್ಮಿಗಳು ಕೆಲವು ಗುರುತುಗಳನ್ನು ಬಿಟ್ಟು ಹೋಗಿದ್ದು , ತನಿಖೆ ನಡೆಯುತ್ತಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ ಎಂದು ಮುಖರ್ಜಿ ಹೇಳಿದ್ದಾರೆ.
ತಿಮ್ಮಪ್ಪ ನಾಯಕ ಅವರ ಹತ್ಯೆಗೆ ಕಾರಣ ತಿಳಿದುಬಂದಿಲ್ಲ . ರಾಜ್ಯದ ಅತಿ ಸೂಕ್ಷ್ಮ ಪ್ರದೇಶಗಳ ಕಪ್ಪುಪಟ್ಟಿಯಲ್ಲಿ ಭಟ್ಕಳ ಸೇರಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications