‘ಗುತ್ತಿಗೆ ಪದ್ಧತಿ’ಗೆ ಕ್ರಿಕೆಟಿಗರ ಸಮ್ಮತಿ ; ಬೆಂಗಳೂರಲ್ಲಿ ಬಿಸಿಸಿಐ ಅಧಿಕಾರಿ

‘ಗುತ್ತಿಗೆ ಪದ್ಧತಿ’ಗೆ ಕ್ರಿಕೆಟಿಗರ ಸಮ್ಮತಿ ; ಬೆಂಗಳೂರಲ್ಲಿ ಬಿಸಿಸಿಐ ಅಧಿಕಾರಿ
ಏಷ್ಯಾ ಕಪ್‌ ವೇಳೆಗೆ ನೂತನ ಪದ್ಧತಿಯ ಅನುಷ್ಠಾನ

ಬೆಂಗಳೂರು : ಭಾರತೀಯ ಕ್ರಿಕೆಟಿಗರಿಗೆ ಪರಿಚಯಿಸಲು ಉದ್ದೇಶಿಸಿರುವ ಗುತ್ತಿಗೆ ಆಧಾರ ವೇತನ ಪದ್ಧತಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಜುಲೈಯಲ್ಲಿ ಜಾರಿಗೆ ತರುವ ನಿರೀಕ್ಷೆ ಇದೆ. ಈ ಕುರಿತಾದ ಮಾತುಕತೆಗಳು ಅಂತಿಮ ಘಟ್ಟದಲ್ಲಿ ಇವೆ ಎಂದು ಬಿಸಿಸಿಐ ಆಡಳಿತ ಮಂಡಳಿ ಸದಸ್ಯರು ಸೋಮವಾರ ತಿಳಿಸಿದ್ದಾರೆ.

ಈ ಕಾರ್ಯವು ಅಂತಿಮ ಹಂತದಲ್ಲಿದೆ. ಆಟಗಾರರೊಂದಿಗೆ ಮಾತುಕತೆ ಮುಗಿದಿದೆ. ಅಂಕಗಳ ಆಧಾರಿತ ಶ್ರೇಯಾಂಕ ಪದ್ಧತಿಯನ್ನು ಆಟಗಾರರು ಒಪ್ಪಿಕೊಂಡಿದ್ದಾರೆ. ಅಂತಿಮ ಹಂತದ ದಾಖಲಾತಿ ಕಾರ್ಯ ಪ್ರಗತಿಯಲ್ಲಿದೆ. ಜುಲೈ ತಿಂಗಳಲ್ಲಿ ನಡೆಯುವ ಏಷ್ಯಾ ಕಪ್‌ಗೆ ಮುನ್ನ ಈ ವೇತನ ಪದ್ಧತಿ ಜಾರಿಗೆ ಬರುವ ಸಂಭವವಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಎಸ್‌.ಕೆ.ನಾಯರ್‌ ಹೇಳಿದರು.

ಆಟಗಾರರು ಶ್ರೇಯಾಂಕ ಆಧಾರಿತ ವೇತನಕ್ಕೆ ಒಪ್ಪಿದ್ದಾರೆ. ಉಳಿದಿರುವುದು ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯ ಮಾತ್ರ. ಯಾವ-ಯಾವ ಆಟಗಾರರು ಯಾವ ಶ್ರೇಯಾಂಕದಲ್ಲಿ (ಎ.ಬಿ.ಸಿ.) ಬರುತ್ತಾರೆ ಎಂಬುದನ್ನು ಅಧ್ಯಯನ ನಡೆಸಲು ಸಮಿತಿ ರಚಿಸಲಾಗಿತ್ತು ಎಂದು ನಾಯರ್‌ ಹೇಳಿದರು.

ಪಾಕಿಸ್ತಾನವು ಭಾರತ ಪ್ರವಾಸಕ್ಕೆ ಸಿದ್ಧವಾಗಿದೆ. ಸರಕಾರ ಸಮ್ಮತಿಸಿದಲ್ಲಿ 2005ರ ಮಾರ್ಚ್‌-ಏಪ್ರಿಲ್‌ನಲ್ಲಿ ಸರಣಿ ನಡೆಯಲಿದೆ ಎಂದ ನಾಯರ್‌- ಏಕದಿನ ಪಂದ್ಯಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸಿದ ಆಟಗಾರರಿಗೆ ನಿವೃತ್ತಿ ವೇತನ ನೀಡುವ ಯಾವುದೇ ಪ್ರಸ್ತಾಪಗಳು ನಮ್ಮ ಮುಂದಿಲ್ಲ ಎಂದರು.

ಭಾರತವನ್ನು ಟೆಸ್ಟ್‌ನಲ್ಲಿ ಪ್ರತಿನಿಧಿಸಿದ ಹಾಲಿ ಮತ್ತು ಮಾಜಿ ಆಟಗಾರರಿಗೆ ಮತ್ತು ಟೆಸ್ಟ್‌ ನಲ್ಲಿ ಕಾರ್ಯ ನಿರ್ವಹಿಸಿದ್ದ ತೀರ್ಪುಗಾರರಿಗೆ ಕಳೆದ ತಿಂಗಳಿನಿಂದ (ಏಪ್ರಿಲ್‌ 2004) ಅನ್ವಯವಾಗುವಂತೆ ಬಿಸಿಸಿಐ ನಿವೃತ್ತಿ ವೇತನ ನೀಡುತ್ತಿದೆ. ಒಟ್ಟು 174 ಮಂದಿ ಈ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ನಾಯರ್‌ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+