ಮಾಂಸಹಾರಿಗಳಿಗೆ ಬಸವ ಧರ್ಮದ ಬಾಗಿಲು ತೆರೆದ ಶರಣ ಸಮ್ಮೇಳನ

ಮಾಂಸಹಾರಿಗಳಿಗೆ ಬಸವ ಧರ್ಮದ ಬಾಗಿಲು ತೆರೆದ ಶರಣ ಸಮ್ಮೇಳನ
ಸಮಾನತೆಯತ್ತ ಬಸವ ಸಮ್ಮೇಳನದ ಮಹತ್ವದ ಹೆಜ್ಜೆ , ಪಾದಪೂಜೆಗೆ ಚಿತ್ರದುರ್ಗ ಶ್ರೀಗಳ ನಕಾರ

ಕೂಡಲ ಸಂಗಮ : ಮಾಂಸಹಾರಿಗಳು ಬಸವ ಧರ್ಮ ಸ್ವೀಕರಿಸಲು ಯಾವುದೇ ಅಡೆತಡೆಗಳಿಲ್ಲ. ಬಸವ ಧರ್ಮ ಸ್ವೀಕರಿಸಿದ ಬಳಿಕ ಮಾಂಸಾಹಾರ ತ್ಯಜಿಸಬೇಕಾದ ಅಗತ್ಯವೂ ಇಲ್ಲ ಎನ್ನುವ ಮಹತ್ವದ ಗೊತ್ತುವಳಿಯನ್ನು ಮೇ 2ರ ಭಾನುವಾರ ಮುಕ್ತಾಯವಾದ ಪ್ರಪ್ರಥಮ ್ಫರಾಷ್ಟ್ರೀಯ ಬಸವ ಸಮ್ಮೇಳನ ಸರ್ವಾನುಮತದಿಂದ ಅಂಗೀಕರಿಸಿದೆ.

ಈ ಮಹತ್ವಾಕಾಂಕ್ಷಿ ಗೊತ್ತುವಳಿಯನ್ನು ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮರುಘ ರಾಜೇಂದ್ರ ಶರಣರು ಮಂಡಿಸಿದರು. ಇಳಕಲ್ಲ ವಿಜಯ ಮಹಾಂತ ಮಠದ ಮಹಾಂತ ಅಪ್ಪಗಳು, ಭಾಲ್ಕಿ ಹೀರೇಮಠದ ಬಸವಲಿಂಗ ಪರಮಾಧ್ಯಕ್ಷರು ಸೇರಿದಂತೆ ವೇದಿಕೆಯ ಮೇಲಿದ್ದ ಮಠಾಧೀಶರು ಚಪ್ಪಾಳೆ ತಟ್ಟುವ ಮೂಲಕ ಗೊತ್ತುವಳಿಯನ್ನು ಸ್ವಾಗತಿಸಿದರು.

ಹಿಂದೂ ಧರ್ಮದಲ್ಲಿರುವ ಜಾತಿ ವ್ಯವಸ್ಥೆ , ಅಸಮಾನತೆ ಹಾಗೂ ವಿವಿಧ ಸ್ತರಗಳ ಶೋಷಣೆಯಿಂದ ಹೊರಬಂದು ಬಸವ ಧರ್ಮ ಕಟ್ಟುವುದಾಗಿ ಮಠಾಧೀಶರು ಘೋಷಿಸಿದರು.

ಸಮಾರಂಭದಲ್ಲಿ ಅನುಮೋದನೆಗೊಂಡ ಇತರ ಬೇಡಿಕೆಗಳು

  • ಸರ್ಕಾರಿ ದಾಖಲೆಯ ಜಾತಿ-ಧರ್ಮ ಕಾಲಂನಲ್ಲಿ ಬಸವಧರ್ಮ ಎಂದು ನಮೂದಿಸ ಬೇಕು.
  • ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸವ ಅಂತರಾಷ್ಟ್ರೀಯ ನಿಲ್ದಾಣ ಎಂಬ ಹೆಸರಿಡಬೇಕು
  • ಆಲಮಟ್ಟಿ ಜಲಾಶಯಕ್ಕೆ ಹರ್ಡೇಕರ್‌ ಮಂಜಪ್ಪ ಅವರ ಹೆಸರಿಡಬೇಕು
  • ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ತೀವ್ರಗತಿಯಲ್ಲಿ ಕಾರ್ಯರಂಭ ಮಾಡಬೇಕು
  • ಬಸವ ಧರ್ಮ ತತ್ವದರ್ಶಿ ಮತ್ತು ವಚನ ಸಾಹಿತ್ಯವನ್ನು ದೇಶದ ಎಲ್ಲಾ ಭಾಷೆಯಲ್ಲಿ ಪ್ರಕಟಿಸಬೇಕು
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+