ಕಾಂಗ್ರೆಸ್‌ಗೆ ಸೋಲುವ ಭಯ, ಜೆಡಿಎಸ್ ನಿರ್ಭಯ - ಸಿದ್ಧರಾಮಯ್ಯ
ಕಾಂಗ್ರೆಸ್‌ಗೆ ಸೋಲುವ ಭಯ, ಜೆಡಿಎಸ್ ನಿರ್ಭಯ - ಸಿದ್ಧರಾಮಯ್ಯ
ಜೆಡಿಎಸ್ ಸರಳ ಬಹುಮತ ಪಡೆವಾಗ ಕಾಂಗ್ರೆಸ್‌ಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ
ರಾಜ್ಯದಲ್ಲಿ ಸೋಲು ಖಚಿತ ಎನ್ನುವುದು ಕಾಂಗ್ರೆಸ್‌ಗೆ ಮನವರಿಕೆಯಾಗಿರುವುದು ಸಂತಸದ ವಿಷಯ. ರಾಜ್ಯ ನಾಯಕರು ಏನೇ ಬಡಾಯಿ ಕೊಚ್ಚಬಹುದು. ಹೈಕಮಾಂಡಿಗೆ ಮಾತ್ರ ಗೆಲ್ಲುವ ನಂಬಿಕೆ ಇಲ್ಲ. ಅವರಿಗೆ ಸೋಲು ಮನವರಿಕೆಯಾಗಿದೆ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು. ಅವರು ಏ.30ರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಯಾವ ಕಾರಣಕ್ಕೂ ಅತಂತ್ರ ವಿಧಾನಸಭೆ ರಚನೆಯಾಗುವುದಿಲ್ಲ. ಜನರ ಆಶೀರ್ವಾದ ನೈಜವಾದ ನಮ್ಮ ಜನತಾದಳದ ಮೇಲೆ ಇರುವುದರಿಂದ ತ್ರಿಶಂಕು ವಿಧಾನಸಭೆ ಭಯ ಬೇಡ ಎಂದು ಸಿದ್ಧರಾಮಯ್ಯ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications