ಯಾರ ಬೆಂಬಲವೂ ಬೇಕಾಗಿಲ್ಲ ! 73ರ ಹುಟ್ಟುಹಬ್ಬದಲ್ಲಿ ಕೃಷ್ಣ ವಿಶ್ವಾಸ
ಯಾರ ಬೆಂಬಲವೂ ಬೇಕಾಗಿಲ್ಲ ! 73ರ ಹುಟ್ಟುಹಬ್ಬದಲ್ಲಿ ಕೃಷ್ಣ ವಿಶ್ವಾಸ
ಯಾರದು ನಬಿ ? ಅವರಿಗೇನು ಗೊತ್ತು ? ಅವರಿಲ್ಲಿ ಬಂದಿದ್ರಾ ?
ನಬಿಯವರನ್ನು ನೀವೇನಾದ್ರೂ ನೋಡಿದ್ರಾ? ಅವರೇನು ಬಂದು ರಾಜ್ಯದಲ್ಲಿ ಚುನಾವಣೆ ನಡೆಸಿದ್ರಾ? ಎಂದು ನಬಿ ಅವರ ನಡವಳಿಕೆಯ ಕುರಿತು ಮುಖ್ಯಮಂತ್ರಿಕೃಷ್ಣ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಗುಡುಗಿದರು. ವಿಧಾನಸೌಧದ ದಕ್ಷಿಣ ಬ್ಲಾಕ್- ವಿಕಾಸಸೌಧ ಕಾಮಗಾರಿ ಪರಿಶೀಲಿಸಿದ ನಂತರ (ಏ.30) ಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ನಾವು ಸ್ಪಷ್ಟ ಬಹುಮತ ಪಡೆದೇ ತೀರುತ್ತೇವೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಯಾರ ಬೆಂಬಲವೂ ನಮಗೆ ಬೇಕಾಗಿಲ್ಲ . ಅತಂತ್ರ ವಿಧಾನಸಭೆಯ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ ಎಂದು ಕೃಷ್ಣ ಮತ್ತೊಮ್ಮೆ ಅಚಲ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಕೂಡ ನಬಿ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.
ತಿರುಪತಿಯಲ್ಲಿ ಕೃಷ್ಣರ ಹುಟ್ಟುಹಬ್ಬ
ಮೇ 1ರಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣರ 73ನೇ ಹುಟ್ಟುಹಬ್ಬ. ಪ್ರತಿ ಹುಟ್ಟುಹಬ್ಬದ ಸಂದರ್ಭದಲ್ಲಿಯೂ ತಿರುಪತಿಗೆ ತೆರಳಿಗೆ ತಿಮ್ಮಪ್ಪನಿಗೆ ಪೂಜೆ ಸಲ್ಲಿಸುವುದು ಕೃಷ್ಣ ಅವರ ರೂಢಿ. ಅದರಂತೆ ಈ ಬಾರಿಯೂ ತಿರುಪತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಉದ್ದೇಶದಿಂದ ಪತ್ನಿ ಪ್ರೇಮಾ ಹಾಗೂ ಕುಟುಂಬದ ಸದಸ್ಯರೊಂದಿಗೆ ಕೃಷ್ಣ ಏ.30ರಂದು ತಿರುಪತಿಗೆ ತೆರಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications