ರಸ್ತೆ ಅಪಘಾತದಲ್ಲಿ ಪ್ರಸಾರ ಭಾರತಿ ಅಧ್ಯಕ್ಷ ಎಂ.ವಿ.ಕಾಮತ್ ಪಾರು
ರಸ್ತೆ ಅಪಘಾತದಲ್ಲಿ ಪ್ರಸಾರ ಭಾರತಿ ಅಧ್ಯಕ್ಷ ಎಂ.ವಿ.ಕಾಮತ್ ಪಾರು
ಮಂಗಳೂರು ಸಮೀಪ ಬಸ್ಸಿಗೆ ಡಿಕ್ಕಿ ಹೊಡೆದ ಕಾಮತರ ಕಾರು
ಕಾರಿನ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಈ ಅಫಘಾತ ಸಂಭವಿಸಿದೆ. ಕಾಮತ್ ಹಾಗೂ ಅವರ ಮತ್ತು ಕಾರಿನ ಚಾಲಕ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನನಗೆ ಸಣ್ಣ-ಸಣ್ಣ ಗಾಯಗಳಾಗಿವೆ. ಚಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ. ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಬಹುದು ಎಂದು ಅಪಘಾತದ ಕುರಿತು ಕಾಮತ್ ಪ್ರತಿಕ್ರಿಯಿಸಿದ್ದಾರೆ.
ಎಂ.ವಿ. ಕಾಮತ್ ಟಿ.ಎಮ್.ಎ. ಪೈ. ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯರು. ಪ್ರತಿಷ್ಠಾನದ ಸಂಸ್ಥಾಪಕರ ದಿನಾಚರಣೆ ಮತ್ತು ಕೆಎಮ್‌ಸಿ ಸಂಸ್ಥೆಯ ಸುವರ್ಣಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಅವರು ಆಗಮಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications