ಗುಲ್ಬರ್ಗಾ: ಸುರಪುರದಲ್ಲಿ ಮೆದುಳುಜ್ವರಕ್ಕೆಬಡವರ ಮನೆ ಬಾಲಕ ಬಲಿ
ಗುಲ್ಬರ್ಗಾ: ಸುರಪುರದಲ್ಲಿ ಮೆದುಳುಜ್ವರಕ್ಕೆಬಡವರ ಮನೆ ಬಾಲಕ ಬಲಿ
ಜಿಲ್ಲೆಯ ಮೆದುಳು ಜ್ವರದ ಪ್ರಥಮ ರೋಗಿ ಸಾವು, ಜನತೆ ಆತಂಕ
ಮೆದುಳು ಜ್ವರದ ಸೋಂಕು ಪತ್ತೆಯಾಗಿದ್ದ ಅಂಬರೀಷನನ್ನು ಗುಲ್ಬರ್ಗಾದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು . ಬಾಲಕ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾನೆ ಎಂದು ಜಿಲ್ಲಾ ಸರ್ಜನ್ ಬಿ.ಕೆ.ರೇಣುಕಾ ದೇವಿ ಇತ್ತೀಚೆಗೆ ತಿಳಿಸಿದ್ದರು. ಆದರೆ, ಮೆದುಳು ಜ್ವರದಿಂದ ಚೇತರಿಸಿಕೊಳ್ಳದ ಬಾಲಕ ಏ.29ರ ರಾತ್ರಿ ಸುರಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ.
ಗುಲ್ಬರ್ಗಾ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಂಬರೀಷನ ತಂದೆತಾಯಿಗಳಿಗೆ ಖರ್ಚುವೆಚ್ಚಗಳನ್ನು ಭರಿಸುವ ಸಾಮರ್ಥ್ಯ ಇರಲಿಲ್ಲ . ಅಲ್ಲದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕನ ಜೀವದ ಮೇಲೆ ನಂಬಿಕೆ ಕಳೆದುಕೊಂಡ ಬಡಪಾಯಿ ಪೋಷಕರು, ಅಂಬರೀಷನನ್ನು ಏ.29ರಂದು ಸುರಪುರಕ್ಕೆ ವಾಪಸ್ಸು ಕರೆ ತಂದಿದ್ದರು.
ಗುಲ್ಬರ್ಗಾ ಜಿಲ್ಲೆಯಲ್ಲಿ ಮೆದುಳು ಜ್ವರ ಕಾಣಿಸಿಕೊಂಡಿರುವ ಬಗ್ಗೆ ಜನತೆ ಆತಂಕಗೊಂಡಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸುತ್ತಿಲ್ಲ , ಜನ ಜಾಗೃತಿ ಮೂಡಿಸುತ್ತಿಲ್ಲ ಎನ್ನುವ ದೂರುಗಳೂ ಕೇಳಿಬರುತ್ತಿವೆ. ಪತ್ರಿಕೆಗಳ ಮೂಲಕವಷ್ಟೇ ಜನರಿಗೆ ಮೆದುಳು ಜ್ವರದ ಸುದ್ದಿಗಳು ಮುಟ್ಟುತ್ತಿವೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಗುಲ್ಬರ್ಗಾ : ಬಿಸಿಲ ದಿನಗಳಲ್ಲಿ ಹಾಜರಿ ಹಾಕಿದ ಜಪಾನಿ ಮೆದುಳು ಜ್ವರ
ಮುಖಪುಟ / ವಾರ್ತೆಗಳು












Click it and Unblock the Notifications