ಒಂದೆಡೆ ಕೆಪಿಸಿಸಿ ಬೊಂಬಡ, ಇನ್ನೊಂದೆಡೆ ಎಐಸಿಸಿ ಗೌಡರ ಸಂಗಡ !
ಒಂದೆಡೆ ಕೆಪಿಸಿಸಿ ಬೊಂಬಡ, ಇನ್ನೊಂದೆಡೆ ಎಐಸಿಸಿ ಗೌಡರ ಸಂಗಡ !
ಬಹುಮತ ಪಡೆಯದಲ್ಲಿ ಜೆಡಿಎಸ್ ಬೆಂಬಲ ಕೋರಲು ಕಾಂಗ್ರೆಸ್ ನಿರ್ಧಾರ
ಕರ್ನಾಟಕದಲ್ಲಿ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ನಮಗಿದೆ. ನಾವೆಂದುಕೊಂಡಂತೆ ಆಗದಿದ್ದಲ್ಲಿ ಅವರ ಬೆಂಬಲ ಕೇಳಲಾಗುವುದು. ದೇವೇಗೌಡರ ಪಕ್ಷ ಬೆಂಬಲ ನೀಡುವ ವಿಶ್ವಾಸ ನಮಗಿದೆ. ಅವರು ಬಿಜೆಪಿ ಅಥವಾ ಬಿಜೆಪಿ ಪರವಾಗಿರುವ ಪಕ್ಷಗಳಿಗೆ ಬೆಂಬಲ ನೀಡಲಾರರು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ (ಏ.29) ನಬಿ ಹೇಳಿದರು.
ಲೋಕಸಭೆಯಲ್ಲಿ ಈ ಬಾರಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಲಿದೆ ಎಂದ ಅವರು, ಕಾಂಗ್ರೆಸ್ ಕರ್ನಾಟಕದಲ್ಲಿ ಕಳೆದ ಬಾರಿಯಷ್ಟು ಸ್ಥಾನ ಪಡೆಯಲಾರದು ಎಂಬುದನ್ನು ಒಪ್ಪಿಕೊಂಡರು.
ಕೇಂದ್ರದಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ. ನಮ್ಮ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನೂತನ ಪ್ರಧಾನಿ ಆಗಲಿದ್ದಾರೆ ಎಂಬುದು ನಮ್ಮ ಆಶಯ. ಈ ಕುರಿತು ಮಿತ್ರ ಪಕ್ಷಗಳೊಡನೆ ಚರ್ಚಿಸಿ ನಿರ್ಧರಿಸಲಿದ್ದೇವೆ ಎಂದು ನಬಿ ಹೇಳಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications