‘ದ.ಕ. ಪೊಲೀಸರು ಬಿಜೆಪಿ ಮತ್ತು ಭಜರಂಗ ದಳದ ಜೊತೆ ಸೇರಿದ್ದಾರೆ’
‘ದ.ಕ. ಪೊಲೀಸರು ಬಿಜೆಪಿ ಮತ್ತು ಭಜರಂಗ ದಳದ ಜೊತೆ ಸೇರಿದ್ದಾರೆ’
ಸಚಿವದ್ವಯರ ವಿರುದ್ಧ ದೂರು ದಾಖಲಿಸಿದ ಪೊಲೀಸರು
ಪೊಲೀಸರು ಸತ್ಯಾಸತ್ಯತೆಯನ್ನು ಪರೀಕ್ಷಿಸದೆ ತಮ್ಮ ಪಕ್ಷದವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ನಾವು ಇದನ್ನು ಅನುಭವಿಸಬೇಕಾಗಿ ಬಂದಿದೆ. ಅಲ್ಲಿ ಬಿಜೆಪಿ ಮತ್ತು ಭಜರಂಗದಳ ಮುಗ್ಧ ಜನರ ಮೇಲೆ ಮಾಡಿದ ದಾಳಿಯನ್ನು ತಡೆಯುವಲ್ಲಿ ಪೊಲೀಸರು ಸಂಪೂರ್ಣ ವಿಫಲವಾಗಿದ್ದಾರೆ. ಅವರ ವರ್ತನೆ ಅತಿಯಾಯಿತು. ದಾಳಿ ನಡೆಯುವಾಗ ಪೊಲೀಸರು ಎಲ್ಲಿದ್ದರು? ಎಂದು ಪ್ರಶ್ನಿಸಿದರು.
ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಹಿಂದೆ ಪೂಜಾರಿ ಮಂಗಳೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ದಕ್ಷಿಣ ಕನ್ನಡ ಅವರ ಹುಟ್ಟೂರು.
ದಕ್ಷಿಣ ಕನ್ನಡದ ಉಡುಪಿ ಮತ್ತು ಮಂಗಳೂರಿನಲ್ಲಿ ಚುನಾವಣೆ(ಎಪ್ರಿಲ್.26) ಬಳಿಕ ತೀವ್ರವಾದ ಕಲಹಗಳು ನಡೆದಿದ್ದವು. ಈ ಕುರಿತು ಪೊಲೀಸರು ಸಚಿವರಾದ ರಮನಾಥ ರೈ ಹಾಗೂ ವಸಂತ ಸಾಲಿಯಾನ್ ವಿರುದ್ಧ ದೂರು ದಾಖಲಿಸಿ ಕೊಂಡಿದ್ದಾರೆ.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications