ಗುಲ್ಬರ್ಗಾ : ಬಿಸಿಲ ದಿನಗಳಲ್ಲಿ ಹಾಜರಿ ಹಾಕಿದ ಜಪಾನಿ ಮೆದುಳು ಜ್ವರ
ಗುಲ್ಬರ್ಗಾ : ಬಿಸಿಲ ದಿನಗಳಲ್ಲಿ ಹಾಜರಿ ಹಾಕಿದ ಜಪಾನಿ ಮೆದುಳು ಜ್ವರ
ಹಂದಿಗಳ ನಿಯಂತ್ರಣಕ್ಕೆ, ಸೊಳ್ಳೆಗಳ ದಮನಕ್ಕೆ ಜಿಲ್ಲಾಧಿಕಾರಿ ಸೂಚನೆ
ಸಾಂಕ್ರಾಮಿಕ ರೋಗಗಳ ಸರ್ವೇಕ್ಷಣಾ ಸಮಿತಿಯ ಇತ್ತೀಚಿನ ಸಭೆಯಲ್ಲಿ ಮೆದುಳು ಜ್ವರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡಿರುವ ವಿಷಯ ಚರ್ಚೆಗೆ ಬಂತು. ಈ ಕುರಿತು ಆತಂಕ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಪರ್ವೇಜ್ ಅಂಜುಂ, ತಕ್ಷಣವೇ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ತಿಳಿಸಿದರು.
ಸುರಪುರ ಪ್ರದೇಶದ ಅಂಬರೀಷ್ ಎನ್ನುವ 9 ವರ್ಷದ ಬಾಲಕನಿಗೆ ಜಪಾನಿ ಮೆದುಳು ಜ್ವರದ ಸೋಂಕು ತಗುಲಿದ್ದು , ಇದು ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಮೆದುಳು ಜ್ವರದ ಪ್ರಕರಣವಾಗಿದೆ ಎಂದು ಜಿಲ್ಲಾ ಸರ್ಜನ್ ಬಿ.ಕೆ.ರೇಣುಕಾ ದೇವಿ ಸಭೆಯಲ್ಲಿ ತಿಳಿಸಿದರು.
ಜಪಾನಿ ಮೆದುಳು ಜ್ವರ ಹಂದಿಗಳ ಮೂಲಕ ಮನುಷ್ಯನಿಗೆ ಹರಡುತ್ತದೆ. ಆ ಕಾರಣದಿಂದಾಗಿ ವಾಸಸ್ಥಳಗಳಿಂದ ಹಂದಿಗಳನ್ನು ದೂರವಿಡಲು ಕ್ರಮ ಕೈಗೊಳ್ಳುವಂತೆ ಗುಲ್ಬರ್ಗಾ ಮಹಾನಗರ ಪಾಲಿಕೆಯ ಆಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಸೊಳ್ಳೆಗಳ ದಮನಕ್ಕೂ ಆದ್ಯತೆ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿ ಅಂಜುಂ- ಬೇಸಗೆಯ ದಿನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕರುಳಬೇನೆಯನ್ನು ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗಿರಬೇಕು ಎಂದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications