‘ಮೊದಲ ಹಂತ ಮತದಾನೋತ್ತರ ಸಮೀಕ್ಷೆ ಕಾಂಗ್ರೆಸ್‌ಪ್ರಚಾರದಂತಿದೆ’
‘ಮೊದಲ ಹಂತ ಮತದಾನೋತ್ತರ ಸಮೀಕ್ಷೆ ಕಾಂಗ್ರೆಸ್‌ಪ್ರಚಾರದಂತಿದೆ’
ಸಮೀಕ್ಷೆನ್ನು ಎಲ್ಲೆಡೆ ಮತದಾನ ನಡೆದ ಬಳಿಕವೇ ಪ್ರಕಟಿಸಬೇಕು : ಬಿಜೆಪಿ
ಮೊದಲ ಹಂತದ ಮತದಾನೋತ್ತರ ಸಮೀಕ್ಷೆ ಯಲ್ಲಿ ‘ಕಾಂಗ್ರೆಸ್‌ಗೆ ನಿಚ್ಚಳ ಬಹುಮತ ’ ಎಂದು ಹೇಳಿದರು. ಎರಡನೇ ಹಂತದ ಸಮೀಕ್ಷೆಯಲ್ಲಿ ‘ಸರಿ-ಸಮಾನ ಸ್ಪರ್ಧೆ’ ಎಂದು ಹೇಳಿದ್ದಾರೆ. ಈಗ ಅವರು ಗೋಡೆಯ ಮೇಲೆ ದೀಪ ಇಟ್ಟಿದ್ದಾರೆ. ಇದು ಫಲಿತಾಂಶ ಪ್ರಕಟವಾದೊಡನೆ ನುಣಿಚಿಕೊಳ್ಳುವ ಅವರ ಪ್ರಯತ್ನವಾಗಿದೆ ಎಂದು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಆರೋಪಿಸಿದ್ದಾರೆ.
ಈ ಎರಡು ಹಂತದ ಸಮೀಕ್ಷೆಯನ್ನು ಹೋಲಿಸಿದಾಗ ಅಕ್ರಮ ಸ್ಪಷ್ಟವಾಗುತ್ತದೆ. ಮೊದಲ ಹಂತದ ಸಮೀಕ್ಷೆ ಕಾಂಗ್ರೆಸ್ ಪರ ಪ್ರಚಾರವಾಗಿದೆ. ಅದಕ್ಕಾಗಿ ಸಮೀಕ್ಷೆಗಳನ್ನು ಸಂಪೂರ್ಣ ಮತದಾನ ನಡೆದ ಬಳಿಕವೆೇಪ್ರಕಟಿಸಬೇಕು ಎಂಬುದು ಬಿಜೆಪಿ ಅಭಿಪ್ರಾಯ ಎಂದು ಹೇಳಿದರು.
ವಿವಿಧ ಚಾನೆಲ್‌ಗಳು ತಮಗೆ ಬೇಕಾದಂತೆ ಸಮೀಕ್ಷೆ ಬರೆದಿವೆ. ಸಮೀಕ್ಷೆಗಳು ‘ಆಶ್ಚರ್ಯಕರ ’, ‘ಪಕ್ಷಪಾತ’, ‘ಭೇದ ಭಾವಯುತ’, ‘ಆನಾರೋಗ್ಯಕರ ಬೆಳವಣಿಗೆ’ಯಾಗಿದೆ ಎಂದು ಕಿಡಿಯಾಡಿದರು.
ಡಾ.ರಾಜ್‌ಒಳಗೊಂಡಂತೆ ಹಲವು ಮತದಾರರ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ಒಂದು ಕಡೆ ಪತಿ ಮತ್ತು ಪತ್ನಿ ಮತ ಚಲಾಯಿಸಲು ಜೊತೆಯಲ್ಲಿ ಬಂದರು. ಅವರಲ್ಲಿ ಪತಿಯನ್ನು ‘ಮೃತ’ ಎಂದು ನಮೂದಿಸಲಾಗಿತ್ತು ಎಂದು ನಡೆದ ಘಟನೆಯಾಂದನ್ನು ಅವರು ವಿವರಿಸಿದರು.
ಮತಪಟ್ಟಿಯನ್ನು ಸರಕಾರಿ ಅಧಿಕಾರಿಗಳು ತಯಾರಿಸುವುದು ನಿಜ . ಆದರೆ ಆಡಳಿತರೂಢ ಕಾಂಗ್ರೆಸ್‌ಪಕ್ಷ ಹಸ್ತಕ್ಷೇಪ ನಡೆಸಿ ಇತರ ಪಕ್ಷದ ಕಡೆ ಒಲವು ಹೊಂದಿದ ಮತದಾರರ ಹೆಸರನ್ನು ಕಿತ್ತುಹಾಕಿಸಿದೆ. ಮತದಾರರ ಪಟ್ಟಿ ತಯಾರಿಸುವವರಿಗೆ ವೃತ್ತಿಪರತೆ ಮತ್ತು ಹೊಣೆಗಾರಿಕೆ ಇರಬೇಕು ಎಂದು ಹೇಳಿದರು.
ಚುನಾವಣಾ ಆಯೋಗವು ‘ಬಾರ್ ಕೋಡ್ ಸ್ಮಾರ್ಟ್ ಕಾರ್ಡ್‌ನ್ನು’ಜಾರಿಗೆ ತಂದರೆ ಉತ್ತಮ. ಇದರಿಂದ ನಕಲಿ ಮತದಾನವನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ ಲಿಂಬವಲ್ಲಿ ಅವರು ಗದಗ, ಬಂಟ್ವಾಳ, ಸೋಮವಾರಪೇಟೆ, ಕಾರ್ಕಳ, ಕಾಗೇವಾಡ, ಚಿಕ್ಕಮಗಳೂರು, ಸೊರಬ ,ಸಾಗರ ಮುಂತಾದೆಡೆ ಪಕ್ಷದ ಕಾಯಕರ್ತರ ಮೇಲೆ ದಾಳಿ ನಡೆಸಲಾಗಿದೆ . ಇದೇ ರೀತಿಯಲ್ಲಿ ಕಾಂಗ್ರೆಸ್ ದಾಳಿ ಮುಂದುವರಿಸಿದಲ್ಲಿ ಬಿಜೆಪಿಯು ರಾಜ್ಯಾದ್ಯಂತ ಅವರ ವಿರುದ್ಧ ಶಾಂತಿಯುತ ಹೋರಾಟ ನಡೆಸಲಿದೆ ಎಂದು ಹೇಳಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications