ರಾಷ್ಟ್ರಪತಿ ಭವನದಲ್ಲಿ ನಾಳೆ ಕಥಕ್, ಓಡಿಸ್ಸಿ ಮತ್ತು ಭರತನಾಟ್ಯ !
ರಾಷ್ಟ್ರಪತಿ ಭವನದಲ್ಲಿ ನಾಳೆ ಕಥಕ್, ಓಡಿಸ್ಸಿ ಮತ್ತು ಭರತನಾಟ್ಯ !
ಏಳು ಕಲಾವಿದರು ಬರೆದ ಪುಸ್ತಕ ಕಲಾಂ ಅವರಿಗೆ ಅರ್ಪಣೆ
ಸಿಯಾಚಿನ್‌ಗೆ ಹೋದ ಪ್ರಥಮ ರಾಷ್ಟ್ರಪತಿ, ಗಡಿ-ನಿಯಂತ್ರಣ ರೇಖೆಗೆ ಭೇಟಿ ನೀಡಿದ ಪ್ರಥಮ ರಾಷ್ಟ್ರಪತಿ, ಯೋಗ್ಯ ಅಭ್ಯರ್ಥಿಗಳಿಗೆ ಮತದಾನ ಮಾಡಲು ದೇಶಕ್ಕೆ ಕರೆ ನೀಡಿದ ಪ್ರಥಮ ರಾಷ್ಟ್ರಪತಿ ಹೀಗೆ ದೇಶದ ಸಂವಿಧಾನಾತ್ಮಕ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿ ಮಾದರಿಯಾದ ಕಲಾಂ ಈಗ ನೃತ್ಯಕ್ಕೆ ಸಲಾಂ ಮಾಡಿದ್ದಾರೆ.
ಎಪ್ರಿಲ್ 29ರ ಗುರುವಾರ ದೆಹಲಿಯ ರಾಷ್ಟ್ರಪತಿ ಭವನ ಸಭಾಂಗಣದಲ್ಲಿ ಶಾಸ್ತ್ರೀಯ ನೃತ್ಯ ಪ್ರದರ್ಶನದ ಅಂತರಾಷ್ಟ್ರೀಯ ನಾಟ್ಯದಿನವನ್ನು ಆಯೋಜಿಸಿದ್ದಾರೆ.
ಕಥಕ್ ನಾಟ್ಯಗಾರ್ತಿ ಶೋವನಾ ನಾರಾಯಣ್, ಓಡಿಸ್ಸಿ ನಾಟ್ಯಮಣಿ ಶರೋನ್ ಲೋವೆನ್, ಕರ್ನಾಟಕದ ಭರತನಾಟ್ಯ ಪ್ರವೀಣೆ ಪ್ರತಿಭಾ ಪ್ರಹ್ಲಾದ್, ಕಥಕಳಿ ಪ್ರವೀಣೆ ಸದಾನಂ ಬಾಲಕೃಷ್ಣನ್, ಮೋಹಿನಿಯಾಟ್ಟಂ ಕಲಾವಿದೆ ಭಾರತಿ ಸಿವಾಜಿ, ವಿಜಯಲಕ್ಷ್ಮಿ ಮಣಿಪುರಿ ನೃತ್ಯಗಾರ್ತಿ ಶಿಂಗಾಜಿತ್ ಸಿಂಗ್ ರಾಷ್ಟ್ರಪತಿ ಭವನದಲ್ಲಿ ಆಹ್ವಾನಿತ ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡಲಿರುವರು.
ಭಾರತೀಯ ನಾಟ್ಯ ಶಾಸ್ತ್ರದ ಮೇಲೆ ಈ ಏಳು ಕಲಾವಿದರು ಬರೆದ ಪುಸ್ತಕವೊಂದನ್ನು ಈ ಸಂದರ್ಭದಲ್ಲಿ ರಾಷ್ಟ್ರಪತಿಗೆ ಅರ್ಪಿಸಲಾಗುವುದು. ಈ ಪುಸ್ತಕವು ಭಾರತೀಯ ನೃತ್ಯದ ಇತಿಹಾಸ, ಹುಟ್ಟು , ಸಂಗೀತ, ಶೈಲಿ ಮುಂತಾದ ವಿಷಯದ ಕುರಿತು ಚರ್ಚಿಸಲಿದೆ. ಅಷ್ಟಲ್ಲದೆ ರಾಷ್ಟ್ರಪತಿಗಳು ರಚಿಸಿದ ಎರಡು ಕವನಗಳ ಮೇಲೆ ನೃತ್ಯ ಸಂಯೋಜನೆ ಮಾಡಿ ಪ್ರದರ್ಶಿಸಲಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications