ಅತಂತ್ರಲೋಕಸಭೆ ಭೂತ : ತೃತೀಯ ರಂಗ ರಚನೆಯ ಗಾಳಿಗೋಪುರ
ಅತಂತ್ರಲೋಕಸಭೆ ಭೂತ : ತೃತೀಯ ರಂಗ ರಚನೆಯ ಗಾಳಿಗೋಪುರ
ಎಡ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಬಯಕೆಯಲ್ಲಿ ಕಾಂಗ್ರೆಸ್
ಈ ನಡುವೆ. ಸ್ಪಷ್ಟ ಬಹುಮತ ಗಳಿಸುವ ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್, ಎಡ ಪಕ್ಷಗಳ ಜೆತೆ ಸೇರಿ ಸರಕಾರ ರಚಿಸುವುದಾಗಿ ಹೇಳಿಕೊಂಡಿದೆ. ಫಲಿತಾಂಶ ಪ್ರಕಟವಾದ ಬಳಿಕ ಎನ್‌ಡಿಎ ಮಿತ್ರಕೂಟ ತೊರೆದು ಬರುವ ಯಾವುದೇ ಪಕ್ಷಗಳನ್ನು ಸೇರಿಸಿಕೊಳ್ಳುವುದಿಲ್ಲ ಎಂದೂ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಹೊರತಾದ ತೃತೀಯರಂಗ ರಚಿಸುವುದಾಗಿ ಸಿಪಿಎಂ ಹೇಳಿದೆ. ಅದು ಸಾಧ್ಯವಾಗದಿದ್ದಲ್ಲಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಬೆಂಬಲ ನೀಡುವುದಾಗಿ ಸಿಪಿಎಂ ನಾಯಕ ಬುದ್ಧದೇವ ಭಟ್ಟಾಚಾರ್ಯ ಹೇಳಿದ್ದಾರೆ.
ಕೇಂದ್ರದಲ್ಲಿ ಸರಕಾರ ರಚಿಸುವ ಯಾವುದೇ ಜಾತ್ಯತೀತ ಒಕ್ಕೂಟಕ್ಕೆ ಬೆಂಬಲ ನೀಡುವುದಾಗಿ ಸಮಾಜವಾದಿ ಪಕ್ಷ ತನ್ನ ನಿಲುವನ್ನು ಸ್ಪಷ್ಟ ಪಡಿಸಿದೆ. ಸೋಲಿನ ಭೀತಿಯಿಂದ ನಾವು ಅವರಿಗೆ ಚುನಾವಣೆ ಬಳಿಕ ಬೆಂಬಲ ನೀಡುತ್ತೇವೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ.
ಮಾಜಿ ಪ್ರಧಾನಿ ದೇವೇಗೌಡರದು ಮತ್ತೊಂದು ವರಸೆ. ನಾನು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ. ಅತಂತ್ರ ಲೋಕಸಭೆ ಅನಿವಾರ್ಯವಾದಲ್ಲಿ , ಕನಿಷ್ಠ ಸಂಸದರನ್ನು ಹೊಂದುವಂತಾದರೆ ನಾನೇಕೆ ತಲೆಕೆಡಿಸಿಕೊಳ್ಳಬೇಕು ಎಂದು ದೇವೇಗೌಡರು ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications