‘ಅಟಲ್ ಎಂಬ ಹಳೇಬೇರು’ ನೋಡಿ ನಕ್ಕ ಹೊಸ ಚಿಗುರು ಪ್ರಿಯಾಂಕ
‘ಅಟಲ್ ಎಂಬ ಹಳೇಬೇರು’ ನೋಡಿ ನಕ್ಕ ಹೊಸ ಚಿಗುರು ಪ್ರಿಯಾಂಕ
ರಾಯ್‌ಬರೇಲಿಯಲ್ಲಿ ಸೋನಿಯಾ ಗೆಲುವು ನಿಶ್ಚಯ, ಪ್ರಿಯಾಂಕ ವಿಶ್ವಾಸ
ತಮ್ಮ ತಾಯಿ ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪರ್ಧಿಸಿರುವ ರಾಯ್ ಬರೇಲಿ ಕ್ಷೇತ್ರದಲ್ಲಿ ಮತದಾನ ವೀಕ್ಷಣೆ ನಡೆಸಿದ ಸಂದರ್ಭದಲ್ಲಿ (ಏ.26) ಪ್ರಿಯಾಂಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ವಾಜಪೇಯಿ ಅವರನ್ನು ಟೀಕಿಸಿದರು.
ವಾಜಪೇಯಿ ಅವರರೊಬ್ಬ ಹಿಂದೂ ರಾಷ್ಟ್ರೀಯವಾದಿ. ಆರ್.ಎಸ್.ಎಸ್ ಸ್ವಯಂಸೇವಕ ಎಂದ ಮೇಲೆ ಬೇರೆ ಹೇಳುವುದೇನಿದೆ ? ಅರ್ಥವಾಗುವುದಿಲ್ಲವೇ? ಸ್ವಾಭಾವಿಕವಾಗಿ ಅವರು ಅದೇ ರಾಜಕೀಯವನ್ನು ಮಾಡುತ್ತಾರೆ ಎಂದು ಪ್ರಿಯಾಂಕ ನುಡಿದರು.
ರಾಯ್‌ಬರೇಲಿ ಸಂಪ್ರದಾಯದಂತೆ ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿ ಅಮ್ಮನ ಗೆಲುವು ನಿಶ್ಚಲ. ಆದರೆ ರಾಜ್ಯದಲ್ಲಿ ಆಡಳಿತವಿರುವ ಸಮಾಜವಾದಿ ಪಕ್ಷವು ಕಾಂಗ್ರೆಸ್ ಕಾರ್ಯಕರ್ತರಿಗೆ ಆಮಿಷವೊಡ್ಡುತ್ತಿದೆ ಎಂದು ಪ್ರಿಯಾಂಕ ಆರೋಪಿಸಿದರು.
ರಾಯ್‌ಬರೇಲಿ ಕ್ಷೇತ್ರವನ್ನು ಸೂಕ್ಷ್ಮ ಪ್ರದೇಶವೆಂದು ಆಯೋಗ ಘೋಷಿಸಿ, 173 ಮತಗಟ್ಟೆಗಳಿಗೆ ಅತಿಸೂಕ್ಷ್ಮ ಭದ್ರತೆ ಒದಗಿಸಿತ್ತು. ಕ್ಷೇತ್ರದೆಲ್ಲಡೆ ಸಂಚರಿಸಿದ ಪ್ರಿಯಾಂಕಾ, ಸಂದು ಗೊಂದುಗಳೆನ್ನದೆ ಗಲ್ಲಿ-ಗಲ್ಲಿಯಲ್ಲಿ ಸಂಚರಿಸಿದರು. ಭದ್ರತೆಯನ್ನು ಲೆಕ್ಕಿಸದೆ ಜನರೊಂದಿಗೆ ಬೆರೆತರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications