ಅಲ್ಪ ಬಿಡುವಿನ ನಂತರ ಮೇ4ರಿಂದ ಲೋಕಾಯುಕ್ತರ ಶಿಕಾರಿ ಪ್ರಾರಂಭ
ಅಲ್ಪ ಬಿಡುವಿನ ನಂತರ ಮೇ4ರಿಂದ ಲೋಕಾಯುಕ್ತರ ಶಿಕಾರಿ ಪ್ರಾರಂಭ
ಸರಕಾರಿ ಆಸ್ಪತ್ರೆ, ಸಬ್ ರಿಜಿಸ್ಟ್ರಾರ್ ಕಚೇರಿ ಹಾಗೂ ಸಾರಿಗೆ ಇಲಾಖೆ ಕಚೇರಿಗೆ ಭೇಟಿ
ಸರ್ಕಾರಿ ಕಚೇರಿಗಳಲ್ಲಿನ ಅವ್ಯವಹಾರ, ಭ್ರಷ್ಟಾಚಾರ, ಲಂಚಗುಳಿತನ, ಹದಗೆಡುತ್ತಿರುವ ವ್ಯವಸ್ಥೆಯನ್ನು ಹದಗೊಳಿಸಲೆಂದು ಎಸ್. ವೆಂಕಟಾಚಲ ನೇತೃತ್ವದ ಲೋಕಾಯುಕ್ತ ತಂಡ ಪಾಂಚಜನ್ಯ ಮೊಳಗಿಸಿದೆ. ಚುನಾವಣಾ ಭರಾಟೆಗಳಿಂದ ಲೋಕಾಯುಕ್ತರು ಸರಕಾರಿ ಕಚೇರಿಗಳಿಗೆ ಭೇಟಿ ನೀಡದೇ ಬಹಳ ದಿನಗಳಾಗಿತ್ತು. ಈ ಬಿಡುವಿನ ಅಂತರದಲ್ಲಿ ಲೋಕಾಯುಕ್ತರ ಬಳಿ ನೂರಾರು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತರ ಶಿಕಾರಿ ಮತ್ತೆ ಪ್ರಾರಂಭವಾಗಲಿದೆ.
ರಾಜ್ಯದಲ್ಲಿ ಎರಡು ಹಂತದ ಚುನಾವಣೆಗೆ ತೆರೆ ಬಿದ್ದಿರುವುದರಿಂದ ಮತ್ತೆ ಸಾರ್ವಜನಿಕ ಹಿತಾಸಕ್ತಿಯ ಕಾರ್ಯದಲ್ಲಿ ನಿರತರಾಗುವುದು ಸೂಕ್ತ ಎಂದು ಲೋಕಾಯುಕ್ತರು ತೀರ್ಮಾನಿಸಿದ್ದಾರೆ. ಮೇ 4ರಿಂದ ಆರಂಭವಾಗಲಿರುವ ಲೋಕಾಯುಕ್ತರ ಬೇಟೆ ಮೇ 7ರ ವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸರಕಾರಿ ಆಸ್ಪತ್ರೆ, ಸಬ್ ರಿಜಿಸ್ಟ್ರಾರ್ ಕಚೇರಿ ಹಾಗೂ ಸಾರಿಗೆ ಇಲಾಖೆಗಳಲ್ಲಿ ನಡೆಯಲಿದೆ. ಈ ಕುರಿತು ರಿಜಿಸ್ಟ್ರಾರ್ ಡಿ. ಕೃಷ್ಣಪ್ಪ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications