ಮತ್ತದೇ ರಾಗ: ಮತಯಂತ್ರದೋಷ, ಮತಪಟ್ಟಿಯಲ್ಲಿ ಹೆಸರು ನಾಪತ್ತೆ
ಮತ್ತದೇ ರಾಗ: ಮತಯಂತ್ರದೋಷ, ಮತಪಟ್ಟಿಯಲ್ಲಿ ಹೆಸರು ನಾಪತ್ತೆ
ಧಾರವಾಡದಲ್ಲಿ ಅಕ್ರಮ ಮದ್ಯ ಪತ್ತೆ, ಹೊಂಗವಾಡಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ
ಹಾಸನದ ವಿವಿಧ ಮತಗಟ್ಟೆಗಳಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಮತದಾನ ವಿಳಂಬವಾಗಿ ಪ್ರಾರಂಭವಾಯಿತು. ಹುಬ್ಬಳ್ಳಿಯ ಕೆಲ ಮತಗಟ್ಟೆಗಳಲ್ಲೂ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಮತದಾನ ಕಾರ್ಯ ವಿಳಂಬವಾಗಿ ಪ್ರಾರಂಭವಾಯಿತು. ಇಲ್ಲಿ ಮರು ಮತದಾನ ನಡೆಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಮಂಗಳೂರು, ಹಾಸನಗಳಿಂದಲೂ ಮತಯಂತ್ರದ ದೋಷಗಳು ವರದಿಯಾಗಿವೆ.
ಚಾಮರಾಜನಗರದ 58 ಮತ್ತು 59 ನೇ ಮತಗಟ್ಟೆಗಳ ಮತಯಾದಿಯಲ್ಲಿ ಸುಮಾರು 200 ಮಂದಿಯ ಹೆಸರು ನಾಪತ್ತೆಯಾಗಿವೆ. ಮತದಾನದಿಂದ ವಂಚಿತರಾದವರು ವೋಟು ಚಲಾಯಿಸಲಾಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಕಲಿ ಗುರುತಿನ ಚೀಟಿ : ಧಾರವಾಡದಲ್ಲಿ ನೂರಾರು ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಮತದಾನ ಚುರುಕಿನಿಂದ ನಡೆದಿದೆ. ಈ ನಡುವೆ 1 ಲಕ್ಷ ರುಪಾಯಿ ಮೌಲ್ಯದ ಅಕ್ರಮ ಲಿಕ್ಕರ್ ಸಾಗಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.
ಮತದಾನ ಬಹಿಷ್ಕಾರ : ಚಾಮರಾಜನಗರದ ಸಂತೇಮರಹಳ್ಳಿಯ ಹೊಂಗವಾಡಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ. ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ . ಸಂಪರ್ಕ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಎಂದು ದೂರಿರುವ ಗ್ರಾಮಸ್ಥರು ಮತದಾನದಿಂದ ದೂರ ಉಳಿದಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications