ಚುನಾವಣೋತ್ತರ ಸಮೀಕ್ಷೆ ಪ್ರಕಟಣೆತಡೆಗೆ ಸುಪ್ರಿಂಕೋರ್ಟ್ ನಕಾರ
ಚುನಾವಣೋತ್ತರ ಸಮೀಕ್ಷೆ ಪ್ರಕಟಣೆತಡೆಗೆ ಸುಪ್ರಿಂಕೋರ್ಟ್ ನಕಾರ
ಕೇಂದ್ರ ಸರ್ಕಾರ, ಚುನಾವಣಾ ಆಯೋಗ, ವಿವಿಧ ವಾಹಿನಿಗಳಿಗೆ ನೋಟೀಸ್ ಜಾರಿ
ನ್ಯಾಯಮೂರ್ತಿ ಎಸ್.ರಾಜೇಂದ್ರ ಬಾಬು ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಚುನಾವಣಾ ಸಮೀಕ್ಷೆಗಳಿಗೆ ಸಂಬಂಧಿಸಿದ ಮಹತ್ವದ ತೀರ್ಮಾನವನ್ನು ಏ.26ರ ಸೋಮವಾರ ಪ್ರಕಟಿಸಿತು. ಮೇ 10ರಂದು ನಡೆಯುವ ಅಂತಿಮ ಹಂತದ ಚುನಾವಣೆ ಮುಗಿಯುವವರೆಗೂ ಸಮೀಕ್ಷೆಗಳ ಪ್ರಸಾರ, ಪ್ರಕಟಣೆಯನ್ನು ತಡೆಗಟ್ಟುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಪೀಠ, ಸಮೀಕ್ಷೆಗಳ ಪ್ರಕಟಣೆಗೆ ಹಸಿರು ನಿಶಾನೆ ತೋರಿತು.
ಸಮೀಕ್ಷೆಗಳ ಪ್ರಸಾರ-ಪ್ರಕಟಣೆ ಸಂಬಂಧ ತಮ್ಮ ನಿಲುವುಗಳನ್ನು ತಿಳಿಸುವಂತೆ- ಕೇಂದ್ರ ಸರ್ಕಾರ, ಚುನಾವಣಾ ಆಯೋಗ, ಭಾರತೀಯ ಪ್ರೆಸ್ ಕೌನ್ಸಿಲ್ ಹಾಗೂ ವಿವಿಧ ವಾಹಿನಿಗಳಿಗೆ ನ್ಯಾಯಪೀಠ ನೋಟೀಸ್ ಜಾರಿ ಮಾಡಿದೆ.
(ಏಜನ್ಸೀಸ್)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications