ಚುನಾವಣೆ ಮುಗಿಯಿತು ! ಮೇ13ರತ್ತ ಕತ್ತು ಹೊರಳಿಸಿದ ರಾಜಕಾರಣ
ಚುನಾವಣೆ ಮುಗಿಯಿತು ! ಮೇ13ರತ್ತ ಕತ್ತು ಹೊರಳಿಸಿದ ರಾಜಕಾರಣ
ಮರಳಿ ಅಧಿಕಾರಕ್ಕೆ ಬರುವುದಾಗಿ ಕೃಷ್ಣ ಆತ್ಮ ವಿಶ್ವಾಸದ ನುಡಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ ಹಾಗೂ ವೀರಪ್ಪ ಮೊಯಿಲಿ, ಮೈಸೂರು ರಾಜ ಮನೆತನದ ಶ್ರೀಕಂಠದತ್ತ ಒಡೆಯರ್, ನಟ ಅಂಬರೀಷ್ ಅವರ ಚುನಾವಣಾ ಭವಿಷ್ಯ ಮತಯಂತ್ರದಲ್ಲಿ ದಾಖಲಾಗಿದೆ.
ಶೇ.55ರಿಂದ 60ರ ಆಸುಪಾಸಿನಲ್ಲಿ ಮತದಾನವಾಗಿರುವ ಸಾಧ್ಯತೆಗಳಿದ್ದು , ಮತದಾನದ ನಿಖರ ಪ್ರಮಾಣ ಮಂಗಳವಾರ (ಏ.27) ಮಧ್ಯಾಹ್ನದ ವೇಳೆಗೆ ಸ್ಪಷ್ಟಗೊಳ್ಳಲಿದೆ.
ಮತ್ತೆ ಅಧಿಕಾರಕ್ಕೆ - ಕೃಷ್ಣ
ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಜನತೆ ತಮ್ಮನ್ನು ಆಶೀರ್ವದಿಸಿರುವ ಬಗ್ಗೆ ನಂಬಿಕೆಯಿದ್ದು , ಏ.13ರ ಮತಎಣಿಕೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವುದು ಖಂಡಿತ ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ಮದ್ದೂರು ವಿಧಾನಸಭಾ ಕ್ಷೇತ್ರದ ಸೋಮನಹಳ್ಳಿಯಲ್ಲಿ ಮತ ಚಲಾಯಿಸುವ ಮುನ್ನ ಪತ್ನಿ ಪ್ರೇಮಾ ಅವರೊಂದಿಗೆ ಕೋಲಾರ ಜಿಲ್ಲೆಯ ಕುರುಡುಮಲೈನ ವಿನಾಯಕ ದೇಗುಲದಲ್ಲಿ ಕೃಷ್ಣ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ , ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಮಳೆಬೆಳೆ ಸಮೃದ್ಧವಾಗಿರಲಿ ಎಂದು ದೇವರಿಗೆ ಪೂಜೆ ಸಲ್ಲಿಸಿದ್ದಾಗಿ ಕೃಷ್ಣ ಹೇಳಿದರು.
ಕುರುಡುಮಲೈನಿಂದ ಮಲೆ ಮಹದೇಶ್ವರಕ್ಕೆ ತೆರಳಿದ್ದ ಕೃಷ್ಣ ದಂಪತಿಗಳು ಮಾದೇಶ್ವರನಿಗೆ ಪೂಜೆ ಸಲ್ಲಿಸಿದರು. ಆನಂತರ ಸೋಮನಹಳ್ಳಿಗೆ ತೆರಳಿ ಮತ ಚಲಾಯಿಸಿದರು.
ಸುರತ್ಕಲ್‌ನಲ್ಲಿ ಗಲಭೆ : ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಸಂಭವಿಸಿದ ಗಲಭೆಯಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮಂಗಳೂರಿನ ಕಳಸಾಪುರದಲ್ಲಿ ನಡೆದ ಚುನಾವಣಾ ಹಿಂಸೆಯಲ್ಲಿ 6 ಜನ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಂಗಾರಪ್ಪ ವಿಶ್ವಾಸ : ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಪತ್ನಿ ಸಮೇತ ವೋಟು ಚಲಾಯಿಸಿದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ , ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು. ಅವರೊಂದಿಗೆ ಸೊರಬ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕಿರಿಯ ಪುತ್ರ ಮಧು ಬಂಗಾರಪ್ಪ ಕೂಡ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications