ಮದ್ದೂರು, ಸಾಗರ, ಹಾವೇರೀಲಿ ಚಕಮಕಿ, ಪೊಲೀಸರ ಲಾಠಿಪ್ರಹಾರ

ಮದ್ದೂರು, ಸಾಗರ, ಹಾವೇರೀಲಿ ಚಕಮಕಿ, ಪೊಲೀಸರ ಲಾಠಿಪ್ರಹಾರ
ಹೊಳೆನರಸೀಪುರದಲ್ಲಿ ದೇವೇಗೌಡರ ಸತಾಯಿಸಿದ ಮತಯಂತ್ರ

ಬೆಂಗಳೂರು : ರಾಜ್ಯದ 13 ಲೋಕಸಭೆ ಹಾಗೂ 104 ವಿಧಾನಸಭೆ ಕ್ಷೇತ್ರಗಳಿಗೆ ಸೋಮವಾರ ನಡೆದ ಚುನಾವಣೆ ಸಣ್ಣಪುಟ್ಟ ತಿಕ್ಕಾಟಗಳನ್ನು ಹೊರತುಪಡಿಸಿದಂತೆ ಶಾಂತಿಯುತವಾಗಿ ನಡೆದಿದೆ.

ಮತಯಂತ್ರದಲ್ಲಿನ ದೋಷಗಳು, ಮತಪಟ್ಟಿಯಲ್ಲಿ ಹೆಸರು ನಾಪತ್ತೆ , ಕೆಲವೆಡೆ ಅಕ್ರಮ ಮತದಾನಕ್ಕೆ ಯತ್ನ- ಮುಂತಾದ ಘಟನೆಗಳು ಈ ಬಾರಿಯೂ ಮರುಕಳಿಸಿದೆ. ಮಂಡ್ಯದ, ಮದ್ದೂರು ವಿಧಾನಸಭಾ ಕ್ಷೇತ್ರದ ರಾಮ ರಹೀಮ ನಗರದಲ್ಲಿ ನಡೆದ ಕಾಂಗ್ರೆಸ್‌ ಹಾಗೂ ಜಾತ್ಯತೀತ ಜನತಾದಳದ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದ ಯಾದಪಡವು ಗ್ರಾಮದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು .

ಚುನಾವಣೆಯ ಮುಖ್ಯಾಂಶಗಳು :

  • ನಾಗಮಂಗಲದ ಟಿ.ಬಿ.ಮತಗಟ್ಟೆಯ ಬಳಿ ಮತದಾರರಿಗೆ ಮೂಗುತಿ ವಿತರಿಸುತ್ತಿದ್ದ ಕಾಂಗ್ರೆಸ್‌ ಏಜೆಂಟ್‌ ಒಬ್ಬನನ್ನು ಜಾತ್ಯತೀತ ಜನತಾದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
  • ಹಾವೇರಿ ಜಿಲ್ಲೆಯ ಆಲೂರು ಗ್ರಾಮದಲ್ಲಿ 1200 ಮಂದಿಯ ಹೆಸರುಗಳು ಮತಪಟ್ಟಿಯಿಂದ ನಾಪತ್ತೆಯಾಗಿದ್ದು , ವೋಟು ವಂಚಿತ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಹಾವೇರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಯಾಂದರಲ್ಲಿ ಕಲ್ಲು ತೂರಾಟ ನಡೆದಿದ್ದು , 4 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಪರಿಸ್ಥಿತಿಯನ್ನು ತಹಬಂದಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
  • ಧಾರವಾಡದ ಯಾದವಾಡ ಮತಗಟ್ಟೆ ಹಾಗೂ ಚಿಕ್ಕಮಗಳೂರಿನ ಹಲವು ಮತಗಟ್ಟೆಗಳಲ್ಲಿ ಮತದಾರರ ಹೆಸರು ಮತಪಟ್ಟಿಯಿಂದ ನಾಪತ್ತೆಯಾದ ಕಾರಣ ಗೊಂದಲದ ವಾತಾವರಣ ಉಂಟಾಗಿತ್ತು .
  • ಸಾಗರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು .
ದೇವೇಗೌಡರನ್ನು ಸತಾಯಿಸಿದ ಮತಯಂತ್ರ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತಯಂತ್ರದ ದೋಷ ಪ್ರಕರಣಕ್ಕೆ ಸಾಕ್ಷಿಯಾದದ್ದು ಸೋಮವಾರದ ಚುನಾವಣೆಯ ವಿಶೇಷ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆಯಾಂದರಲ್ಲಿ ಮತ ಚಲಾಯಿಸಿದ ದೇವೇಗೌಡ- ಮತಯಂತ್ರದಲ್ಲಿನ ತಾಂತ್ರಿಕ ದೋಷದ ಕಾರಣ ಸ್ವಲ್ಪ ಹೊತ್ತು ಕಾಯಬೇಕಾಯಿತು.

ಚುನಾವಣಾ ಹಿಂಸಾಚಾರಕ್ಕೆ 8 ಬಲಿ : ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಚುನಾವಣಾ ಹಿಂಸಾಚಾರಕ್ಕೆ ಕನಿಷ್ಠ 8 ಮಂದಿ ಬಲಿಯಾಗಿದ್ದಾರೆ. ಮಣಿಪುರದಲ್ಲಿ ಮೂವರು, ಜಾರ್ಖಂಡ್‌ನಲ್ಲಿ ಇಬ್ಬರು, ಬಿಹಾರ ಹಾಗೂ ಆಂಧ್ರಪ್ರದೇಶಗಳಲ್ಲಿ ತಲಾ ಒಬ್ಬರು ಚುನಾವಣಾ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ.

ಉತ್ತರ ಪ್ರದೇಶ, ಮಣಿಪುರ, ಜಾರ್ಖಂಡ್‌, ಆಂಧ್ರಪ್ರದೇಶ, ಬಿಹಾರ, ಕಾಶ್ಮೀರಗಳಲ್ಲಿ ವ್ಯಾಪಕ ಹಿಂಸಾಚಾರ ನಡೆದಿದೆ. ಕೆಲವೆಡೆ ಮತಗಟ್ಟೆಗಳ ಮೇಲೆ ಉಗ್ರರ ದಾಳಿ ನಡೆದಿದೆ.

(ಏಜನ್ಸೀಸ್‌)

ಮುಖಪುಟ / ಕುರುಕ್ಷೇತ್ರ-2004

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+