ನರಹಂತಕ ವೀರಪ್ಪನ್‌ ಶರಣಾಗತಿಗೆ ಅವಕಾಶ ಕಲ್ಪಿಸಿ - ನೆಡುಮಾರನ್‌

ನರಹಂತಕ ವೀರಪ್ಪನ್‌ ಶರಣಾಗತಿಗೆ ಅವಕಾಶ ಕಲ್ಪಿಸಿ - ನೆಡುಮಾರನ್‌
ವೀರಪ್ಪನ್‌ ಬೇಟೆಗೆ 300 ಕೋಟಿ ರು. ಖರ್ಚು, ತೆರಿಗೆದಾರರ ಹಣ ಮತ್ತೂ ಪೋಲಾಗಬೇಕೆ ?

ಕೊಯಮತ್ತೂರು : ನರಹಂತಕ ವೀರಪ್ಪನ್‌ ಶರಣಾಗಲು ಅವಕಾಶ ಕಲ್ಪಿಸಿಕೊಡಲು ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಮುಂದಾಗಬೇಕು ಎಂದು ತಮಿಳು ರಾಷ್ಟ್ರೀಯ ಆಂದೋಲನದ ನಾಯಕ ನೆಡುಮಾರನ್‌ ಹೇಳಿದ್ದಾರೆ.

ಆತನಿಗೆ ಶರಣಾಗುವ ಬಯಕೆ ಇದೆ. ಈಗ ಹಿಂದಿನಂತೆ ಯಾವ ಬೇಡಿಕೆಯನ್ನು ಮುಂದಿಟ್ಟಿಲ್ಲ. ಈ ಹಿಂದೆ ಆತ ನೀಡಿದ್ದ ಕ್ಷಮಾದಾನ ಪ್ರಸ್ತಾಪವನ್ನು ಎರಡು ಸರಕಾರಗಳು ತಿರಸ್ಕರಿಸಿದ್ದವು ಎಂದು ನೆಡುಮಾರನ್‌ ಹೇಳಿದರು. ಆವರು ಕೊಯಮುತ್ತೂರು ಪ್ರೆಸ್‌ಕ್ಲಬ್‌ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ವೀರಪ್ಪನ್‌ ಬೇಟೆಗಾಗಿ 300 ಕೋಟಿ ರುಪಾಯಿ ವ್ಯಯ ಮಾಡಿದ್ದರೂ ಯಾವ ಪ್ರಗತಿಯೂ ಕಂಡು ಬಂದಿಲ್ಲ. ತೆರಿಗೆದಾರರ ಹಣ ಪೋಲಾಗುತ್ತಿದೆಯಷ್ಟೆ. ಆತನನ್ನು ಕಾಡಲ್ಲಿ ಬಿಟ್ಟಲ್ಲಿ ಸರಕಾರ ಮತ್ತು ಸಾರ್ವಜನಿಕರಿಗೆ ಅಪಾಯ ತಪ್ಪಿದ್ದಲ್ಲ. ಅದಕ್ಕಾಗಿ ಮಾನವೀಯ ನಿಲುವಿನಲ್ಲಿ ಚಿಂತಿಸಿ ಆತನಿಗೆ ಕ್ಷಮಾದಾನ ನೀಡಬೇಕು ಎಂದು ಹೇಳಿದರು.

ಪ್ರಜಾಸತಾತ್ಮಕ ಪ್ರಗತಿಪರ ಒಕ್ಕೂಟದ (ಡಿಪಿಎ) ಪರವಾಗಿ ಚುನಾವಣಾ ಪ್ರಚಾರಕ್ಕಾಗಮಿಸಿದ್ದ ನೆಡುಮಾರನ್‌, ವೀರಪ್ಪನ್‌ನಿಂದ ಕ್ಷಮಾದಾನದ ಕುರಿತಾದ ಯಾವುದೇ ಪ್ರಸ್ತಾಪಗಳು ತಮಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

(ಪಿಟಿಐ)

ಮುಖಪುಟ / ವೀರಪ್ಪನ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+