ಮಲೆನಾಡ ಹಳ್ಳಿಗಳಲ್ಲಿ ಬೇಸಗೆ ಅಭ್ಯಾಗತ ‘ಮಂಗನ ಕಾಯಿಲೆ’ ಪ್ರತ್ಯಕ್ಷ
ಮಲೆನಾಡ ಹಳ್ಳಿಗಳಲ್ಲಿ ಬೇಸಗೆ ಅಭ್ಯಾಗತ ‘ಮಂಗನ ಕಾಯಿಲೆ’ ಪ್ರತ್ಯಕ್ಷ
ಓರ್ವನ ಬಲಿ, 26 ಮಂದಿಗೆ ಸೋಂಕು ಗುಣ, ಆರೋಗ್ಯ ಇಲಾಖೆಯಿಂದ ಲಸಿಕೆ ಆಂದೋಲನ
ಶಿವಮೊಗ್ಗ, ಉತ್ತರ ಕನನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ (Monkey fever) ಕಂಡು ಬಂದಿದ್ದು , ಪ್ರಸಕ್ತ ಬೇಸಗೆಯಲ್ಲಿ 26 ಪ್ರಕರಣಗಳು ವರದಿಯಾಗಿವೆ. ಮಂಗನ ಕಾಯಿಲೆ ಕಂಡುಬಂದಿರುವ ಪ್ರದೇಶಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಈಗಾಗಲೇ 28 ಸಾವಿರ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಶಿವಮೊಗ್ಗದ ಮಲೆನಾಡಿನ ಜಿಲ್ಲೆಗಳಲ್ಲಿ ಮಂಗನ ಕಾಯಿಲೆಯ ಲಸಿಕೆಯನ್ನು ಉಚಿತವಾಗಿ ಹಾಕಲಾಗುತ್ತಿದೆ. ಮಂಗನ ಕಾಯಿಲೆ ಗುಣಪಡಿಸಬಹುದಾದ ವ್ಯಾಧಿಯಾಗಿದ್ದು , ಮೆದುಳಿಗೆ ಸೋಂಕು ತಗುಲಿದಲ್ಲಿ ಮಾತ್ರ ಮಾರಣಾಂತಿಕವಾಗಬಲ್ಲದು ಎಂದು ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಚ್.ಸತೀಶ್ ತಿಳಿಸಿದ್ದಾರೆ.
ಡಾ. ಸತೀಶ್ ನೀಡುವ ಅಂಕಿಅಂಶಗಳ ಪ್ರಕಾರ- ಮಂಗನ ಕಾಯಿಲೆಗೆ ಬಲಿಯಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಓರ್ವ ವ್ಯಕ್ತಿ ಮಂಗನ ಕಾಯಿಲೆಗೆ ಬಲಿಯಾಗಿದ್ದಾನೆ. ಉಳಿದ 26 ಪ್ರಕರಣಗಳಲ್ಲಿ ಕಾಯಿಲೆ ವಾಸಿಯಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications