ದೊಡ್ಡವರ ಹಗರಣ : ಅವನು ಮುತ್ತು ಕೇಳಿದ, ಆಕೆ ದೂರು ಕೊಟ್ಟಳು

ದೊಡ್ಡವರ ಹಗರಣ : ಅವನು ಮುತ್ತು ಕೇಳಿದ, ಆಕೆ ದೂರು ಕೊಟ್ಟಳು
ಸಿಆರ್‌ಪಿಎಫ್‌ ಹಿರಿಯ ಅಧಿಕಾರಿ ವಿರುದ್ಧ ಮಹಿಳಾ ಅಧಿಕಾರಿ ದೂರು

ನವದೆಹಲಿ : ಸಿಆರ್‌ಪಿಎಫ್‌ನ ಅಶೋಕ್‌ ಬಾಲಿ ತನಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಕ್ಷಿಪ್ರ ಪ್ರಹಾರ ಪಡೆಯ ಸಹ ಕಮಾಂಡೆಂಟ್‌ ಸ್ವರ್ಣ ಲತಾ ದೂರು ನೀಡಿದ್ದಾರೆ.

ಬಾಲಿ ಆಗಾಗ ಫೋನು ಮಾಡಿ ನಿನ್ನ ಸಹೋದ್ಯೋಗಿಗಳ ದೂರವಾಣಿ ಸಂಖ್ಯೆಗಳನ್ನು ನೀಡು. ನಾನು ಅವರ ಜೊತೆ ಗೆಳೆತನ ಬೆಳಸಬೇಕು ಎಂದು ಸತಾಯಿಸಿದ್ದಾನೆ. ನಾನು ನಿರಾಕರಿಸಿದ್ದಕ್ಕೆ, ಒಂದು ಸಲ ಎದುರು ಸಿಕ್ಕಿದಾಗ ಮುತ್ತು ನೀಡಲು ಒತ್ತಾಯಿಸಿದ ಎಂದು ಆಂಧ್ರಪ್ರದೇಶದ ಆಲ್‌ವಾಲ್‌ ಪೊಲೀಸ್‌ ಠಾಣೆಯಲ್ಲಿ ಏ.23ರಂದು ಸ್ವರ್ಣಲತಾ ದೂರು ದಾಖಲಿಸಿದ್ದಾರೆ. ಬಾಲಿ, ಸ್ವರ್ಣಲತಾ ಅವರ ಹಿರಿಯಾಧಿಕಾರಿಯಾಗಿದ್ದಾರೆ.

ಇದು ನನ್ನೊಬ್ಬಳ ಸಮಸ್ಯೆಯಲ್ಲ , ಇಡೀ ಮಹಿಳಾ ಬೆಟಾಲಿಯನ್‌ ಸಮಸ್ಯೆ. ಆದರೆ ಅವರ್ಯಾರು ಈ ವಿಷಯ ಹೊರಹಾಕಿಲ್ಲ . ಇದು ನಿರಂತರವಾದ ಉಪಟಳ ಎಂದು ಸ್ವರ್ಣಲತಾ ದೂರು ಸಲ್ಲಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಅವರ ವಾಂಛೆಗಳಿಗೆ ನಿರಾಕರಿಸಿದಕ್ಕೆ, ನಾನು ಗಣರಾಜ್ಯೋತ್ಸವ ಪೆರೆಡ್‌ನಲ್ಲಿ ಭಾಗವಹಿಸುವುದನ್ನು ನಿರಾಕರಿಸಲಾಯಿತು. ಅದನ್ನು ಕುರಿತು ಡಿಐಜಿ ಶರ್ಮಾ ಅರಿಗೆ ಪತ್ರ ಬರೆದಿದ್ದೆ. ಆದರೆ ಅವರು ಬಾಲಿಯನ್ನು ವಿಚಾರಿಸಿದಾಗ ಆತ ನಿರಾಕರಿಸಿದ. ಬಳಿಕ ಹಿರಿಯ ಅಧಿಕಾರಿಗಳಿಂದ ನಾನು ಕಾರ್ಯ ಸರಿಯಾಗಿ ನಿರ್ವಹಿಸುತ್ತಿಲ್ಲ ಎನ್ನುವ ಆಕ್ಷೇಪ ವ್ಯಕ್ತವಾಯಿತು. ಇದು ಪ್ರಕರಣಕ್ಕೆ ತೆರೆ ಎಳೆಯಲು ಅವರು ಮಾಡಿದ ಪ್ರಹಸನ ಎಂದು ಸ್ವರ್ಣಲತಾ ದೂರಿದರು.

ದೂರಿನ ಬಗ್ಗೆ ವಿಚಾರಣೆ ನಡೆಸಿ, ಆ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಫಿಆರ್‌ಎಫ್‌ ಹಿರಿಯ ಅಧಿಕಾರಿಗಳು ಸ್ವರ್ಣಲತಾ ದೂರಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+