ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬಂದರೆ ಸಿದ್ಧರಾಮಯ್ಯ ಮು. ಮಂ.
ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬಂದರೆ ಸಿದ್ಧರಾಮಯ್ಯ ಮು. ಮಂ.
ತರೀಕೆರೆಯಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಘೋಷಣೆ
ತಮ್ಮ ಪಕ್ಷದ ಆಭ್ಯರ್ಥಿ ಪರ ಏಪ್ರಿಲ್ 23ರಂದು ದೇವೇಗೌಡ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದರು.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಕೈಯಲ್ಲಿ ಹಿಡಿದುಕೊಂಡೆ ಮಾತನಾಡಿದ ಅವರು, ಇದನ್ನು ನಮ್ಮ ಪ್ರಣಾಳಿಕೆಯಿಂದ ನಕಲಿ ಮಾಡಲಾಗಿದೆ ಎಂದು ಆಪಾದಿಸಿದರು. ಕರೆಂಟು, ನೀರು, ಉದ್ಯೋಗ ಕೊಡದೆ ರೈತಾಪಿ ವರ್ಗವನ್ನು ಸಾಯುವಂತೆ ಮಾಡಿದ ಕಾಂಗ್ರೆಸನ್ನು ಒದ್ದು ಮನೆಗೆ ಓಡಿಸುವಂತೆ ಮತದಾರರಿಗೆ ದೇವೇಗೌಡ ಕರೆ ನೀಡಿದರು.
ನಮ್ಮ ಸರಕಾರ ಕೇಜಿಗೆ 3ರೂ.ನಂತೆ ಅಕ್ಕಿ ಕೊಡುತ್ತಿತ್ತು. ಕೃಷ್ಣ ರೂ.3.20 ಕ್ಕೆ ಕೊಡುವುದಾಗಿ ಡಂಗುರ ಸಾರಿ 4 ವರ್ಷ ಏನು ಮಾಡಿದರು? ಅಂತಹ ಇನ್ನಷ್ಟು ಆಶ್ವಾಸನೆಗಳು ಎಲ್ಲಿ ಹೋದವು ಎಂದು ಪ್ರಶ್ನಿಸಿದರು.
ನಾನು ರಾಜ್ಯಕ್ಕೆ ಒಳ್ಳೆಯದನ್ನು ಮಾಡಬೇಕು ಎಂಬ ಹುಚ್ಚಿರುವವನು. ಆದರೆ ಈಗ ಕೊಡಲು ಭರವಸೆ ಬಿಟ್ಟು ಬೇರೇನೂ ನನ್ನ ಬಳಿ ಇಲ್ಲ. ಭಗವದ್ಗೀತೆ, ಬೈಬಲ್, ಕುರಾನ್ ಎಲ್ಲಾ ಇದೇ ನನಗೆ. ಇದನ್ನು ಪ್ರಾಮಾಣಿಕವಾಗಿ ಪಾಲನೆ ಮಾಡುತ್ತೇನೆ. ಆದರೆ ಅಧಿಕಾರ ನೀವು ಕೊಡಬೇಕು ಎಂದು ದೇವೇಗೌಡ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications