ಅಪಘಾತದಲ್ಲಿ ಇಬ್ಬರು ಸಾವು, ಮಾಜಿ ಸಚಿವ ಸರ್‌ನಾಯಕ್ ಪಾರು
ಅಪಘಾತದಲ್ಲಿ ಇಬ್ಬರು ಸಾವು, ಮಾಜಿ ಸಚಿವ ಸರ್‌ನಾಯಕ್ ಪಾರು
ಕಾರಿನ ಚಕ್ರ ಸ್ಫೋಟಿಸಿ ಸಂಭವಿಸಿದ ದುರಂತ
ಸಿಂಧಗಿ ಕ್ರಾಸ್ ಸಮೀಪ ಈ ಘೋರ ಅಪಘಾತ ಸಂಭವಿಸಿದೆ (ಏ.22ರಂದು). ಸಚಿವರು ಸಂಚರಿಸುತ್ತಿದ್ದ ಕಾರಿನ ಚಕ್ರ ಸ್ಫೋಟಿಸಿದ ಪರಿಣಾಮವಾಗಿ ಎದುರು ಬರುತ್ತಿದ್ದ ಟಿಪ್ಪರಿಗೆ ಕಾರು ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಚುನಾವಣೆಯ ನಿಮಿತ್ತ ಸಚಿವರೊಂದಿಗೆ ಕಾರಿನಲ್ಲಿ ಸಂಚರಿಸುತ್ತಿದ್ದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲೇ ಅಸುನೀಗಿದ್ದಾರೆ. ತಲೆಗೆ ಗಾಯಗೊಂಡಿರುವ ಅಜಯ್‌ಕುಮಾರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications