‘ರಂಗ, ಎಸ್ಸೆಸ್ಸೆಲ್ಸಿ’ ಜೊತೆ ‘ರಿಲಯನ್ಸ್ ಇಂಡಿಯಾ ಮೊಬೈಲ್’ ನಂಟು
‘ರಂಗ, ಎಸ್ಸೆಸ್ಸೆಲ್ಸಿ’ ಜೊತೆ ‘ರಿಲಯನ್ಸ್ ಇಂಡಿಯಾ ಮೊಬೈಲ್’ ನಂಟು
ರಿಲಯನ್ಸ್ ಮೊಬೈಲ್‌ನಲ್ಲಿ ಚಿತ್ರದ ಹಾಡು, ಸಂಗೀತ, ದೃಶ್ಯ ತುಣುಕುಗಳು
ರಿಲಯನ್ಸ್ ಕಂಪನಿಯೀಗ ಕನ್ನಡ ಚಿತ್ರದ್ಯೋಮದೊಂದಿಗೆ ನಂಟು ಬೆಳೆಸಿಕೊಂಡಿದೆ. ಏಪ್ರಿಲ್ 23ರಂದು ಬಿಡುಗಡೆಯಾದ ಕನ್ನಡ ಚಿತ್ರ ‘ರಂಗ ಎಸ್‌ಎಸ್‌ಎಲ್‌ಸಿ’ ಚಿತ್ರತಂಡದೊಂದಿಗೆ ರಿಲಯನ್ಸ್ ಒಪ್ಪಂದ ಮಾಡಿಕೊಂಡಿದ್ದು - ‘ರಂಗ ಎಸ್‌ಎಸ್‌ಎಲ್‌ಸಿ’ ಚಿತ್ರದ ಹಾಡು, ಸಂಗೀತ, ದೃಶ್ಯ ತುಣುಕುಗಳು ಮೊಬೈಲ್ ಮೂಲಕ ಆಲಿಸಬಹುದು ಮತ್ತು ನೋಡಬಹುದು. ಇದಕ್ಕೂ ಮುಂಚೆ ವಾರಿಷ್, ವಿರುಮಾಂಡಿ ಮುಂತಾದ ಚಿತ್ರತಂಡಗಳೊಂದಿಗೂ ರಿಲಯನ್ಸ್ ಇಂಥದ್ದೇ ಒಪ್ಪಂದ ಮಾಡಿಕೊಂಡಿತ್ತು.
7 ಮಿಲಿಯನ್ ಗ್ರಾಹಕರನ್ನು ಹೊಂದಿರುವ ರಿಲಯನ್ಸ್ ಭಾರತದ ಅತಿ ದೊಡ್ಡ ಮೊಬೈಲ್ ಸೇವಾ ವ್ಯವಸ್ಥೆಯನ್ನು ಒದಗಿಸುತ್ತಿರುವ ಸಂಸ್ಥೆ. 2004ರ ಫೆಬ್ರವರಿ ತಿಂಗಳಲ್ಲಿ ‘ರಿಮ್’ (ರಿಲಯನ್ಸ್ ಇಂಡಿಯಾ ಮೊಬೈಲ್) ಹೆಸರಿನ ಪ್ರೀಪೇಯ್ಡ್ ವ್ಯವಸ್ಥೆಯನ್ನೂ ಕೂಡ ರಿಲಯನ್ಸ್ ಪರಿಚಯಿಸಿದೆ.
ಮಾಹಿತಿಗಳಿಲ್ಲದೆ, ಹೊಸ ಹೊಸ ವಿಷಯಗಳ ಅರಿವಿಲ್ಲದೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುವುದು ಕಷ್ಟ. ವೇಗದಲ್ಲಿ ಓಡುತ್ತಿರುವ ನಮ್ಮ ದಿನನಿತ್ಯದ ಚಟುವಟಿಕೆಗಳ ನಡುವೆ ಟಿವಿ, ಪತ್ರಿಕೆಗಳನ್ನೂ ಸಹ ನೋಡಲು ಸಮಯ ಇರದಿದ್ದರೆ ಅದರಲ್ಲಿ ಆಶ್ಚರ್ಯಪಡುವಂಥದ್ದೇನಿಲ್ಲ. ಹೀಗಿರುವಾಗ ಮಾಹಿತಿಯ ಮಹಾಪೂರವನ್ನೇ ಹೊತ್ತು ತಂದಿರುವ ‘ಆರ್-ವಲ್ಡ್’ ಇರುವ ರಿಲಯನ್ಸ್ ಮೊಬೈಲ್ ತುಂಬ ಅನುಕೂಲಕರ ಎಂದು ರಿಲಯನ್ಸ್ ಇನ್ಫೋ ಕಾಂನ ಅಧ್ಯಕ್ಷ ಮಹೇಶ್ ಪ್ರಸಾದ್ ಅಭಿಪ್ರಾಯಪಡುತ್ತಾರೆ.
ಕರ್ನಾಟಕದಲ್ಲೇ 4, 89,968 ಗ್ರಾಹಕರನ್ನು ಹೊಂದಿರುವ ರಿಲಯನ್ಸ್ ಸಂಸ್ಥೆಯು ದಿನದಿಂದ ದಿನಕ್ಕೆ ಎತ್ತರಕ್ಕೆ ಬೆಳೆಯುತ್ತಿದೆ. ಅಂತೆಯೇ ಮೊಬೈಲ್ ಎನ್ನುವಂಥದ್ದು ಎಲ್ಲರೂ ಬಳಸಬಲ್ಲ ಅಗ್ಗದ ವಸ್ತು ಎಂದು ತೋರಿಸಿ ಕೊಟ್ಟಿದೆ. ಒಟ್ಟಿನಲ್ಲಿ ಇದು ಗ್ರಾಹಕರ ಕಾಲ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications