ರಾಜ್ಯದ ವಿವಿಧೆಡೆ ಭಾರೀ ಆಲಿಕಲ್ಲು ಮಳೆ ; ಸಿಡಿಲು ಬಡಿ-ದು 8 ಸಾವು
ರಾಜ್ಯದ ವಿವಿಧೆಡೆ ಭಾರೀ ಆಲಿಕಲ್ಲು ಮಳೆ ; ಸಿಡಿಲು ಬಡಿ-ದು 8 ಸಾವು
ವಸ್ತು ಪ್ರದರ್ಶನದ ಶಾಮಿಯಾನ ಕುಸಿದು ಪರದಾಡಿದ ಜನ
ನೆಲಮಂಗಲದ ಬಳಿ ಇಬ್ಬರು, ಮೈಸೂರಿನಲ್ಲಿ ಇಬ್ಬರು, ಗುಲ್ಬರ್ಗ ಜಿಲ್ಲೆಯಲ್ಲಿ ಮೂವರು ಸಿಡಿಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಏ.22ರ ಗುರುವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು , ಮಳೆಯ ಆರ್ಭಟಕ್ಕೆ ಸಿಲುಕಿ 150 ಮರಗಳು ಉರುಳಿವೆ. ಆದರೆ ಯಾವುದೇ ಸಾವುನೋವಿನ ಘಟನೆಗಳು ವರದಿಯಾಗಿಲ್ಲ ಎಂದು ಪೊಲೀಸ್ ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳು ತಿಳಿಸಿದ್ದಾರೆ.
ವಸ್ತು ಪ್ರದರ್ಶನಕ್ಕೆ ವರುಣನ ಅವಕೃಪೆ : ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಗ್ರಾಹಕರ ವಸ್ತು ಪ್ರದರ್ಶನದ ಶಾಮಿಯಾನ ಕುಸಿದು ಬಿದ್ದು, ಸುಮಾರು 200 ಮಂದಿ ಎರಡು ಗಂಟೆಗಳ ಕಾಲ ಒಳಗಡೆ ಸಿಕ್ಕಿ ಹಾಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications