ಸೀಟಿನ ಸಂಖ್ಯೆ ಎಷ್ಟೇ ಇರಲಿ, ರಾಜ್ಯದಲ್ಲಿ ಎನ್‌ಡಿಎ ನೆಲಸಲಿದೆ: ಜೇಟ್ಲಿ
ಸೀಟಿನ ಸಂಖ್ಯೆ ಎಷ್ಟೇ ಇರಲಿ, ರಾಜ್ಯದಲ್ಲಿ ಎನ್‌ಡಿಎ ನೆಲಸಲಿದೆ: ಜೇಟ್ಲಿ
ಪ್ರಧಾನಿ ಭಾಷಣ ಪತ್ರಿಕೆಗಳಲ್ಲಿ ಸ್ವಲ್ಪ ಏರುಪೇರು
ಈ ಬಾರಿ ರಾಜ್ಯದಲ್ಲಿ ಉತ್ತಮ ಸಂಖ್ಯೆಯಲ್ಲಿ ಮತದಾನವಾಗಿದೆ. ಇದು ಕಾಂಗೈ ಸರಕಾರವನ್ನು ಕಿತ್ತೊಗೆಯಲು ಮನೆಬಿಟ್ಟು ಮತದಾನಕ್ಕೆ ಬಂದವರನ್ನು ಸೂಚಿಸುತ್ತದೆ ಎಂದು ಜೇಟ್ಲಿ ಹೇಳಿದರು. ಏಪ್ರಿಲ್ 22ರ ಗುರುವಾರ ಸುದ್ದಿಗೋಷ್ಠಿಯಲ್ಲಿ ಜೇಟ್ಲಿ ಮಾತನಾಡುತ್ತಿದ್ದರು.
ಸಮ್ಮಿಶ್ರ ಸರಕಾರ ಮುನ್ನಡೆಸಿ ದಣಿದಿದ್ದೇನೆ ಎಂಬ ಪ್ರಧಾನಿಯ ಮಾತಿನ ಕುರಿತು ಪ್ರತಿಕ್ರಿಯಿಸಿದ ಅವರು- ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷರು ಈಗಾಗಲೇ ಈ ಕುರಿತು ಸ್ಪಷ್ಟನೆ ನೀಡಿಸಿದ್ದಾರೆ ಎಂದರು. ನಾಗಪುರದಲ್ಲಿ ವಾಜಪೇಯಿ ಮಾಡಿದ ಪೂರ್ಣ ಭಾಷಣವನ್ನು ನಾನು ಓದಿದ್ದೇನೆ. ಆದರೆ ಪತ್ರಿಕೆಯಲ್ಲಿ ಪ್ರಕಟವಾದ ಆ ವಾಕ್ಯ ಸ್ವಲ್ಪ ಅಸಮಂಜಸವಾಗಿದೆ ಎಂದು ಹೇಳಿದರು.
ಹೇಳಿಕೆಯ ಹಾನಿಯನ್ನು ಸರಿಪಡಿಸಲು ಅವರ ಸಂಪೂರ್ಣ ಭಾಷಣದ ವಿವರ ಹೊಂದಿದ ಪ್ರತಿಯನ್ನು ದೆಹಲಿಯಲ್ಲಿ ಬಿಡುಗಡೆ ಮಾಡಲಾಗಿದೆ. ಆ ಕುರಿತು ಬಲಿಷ್ಠವಾದ ಕಡಿಮೆ ಪಕ್ಷಗಳ ಸಮ್ಮಿಶ್ರ ಸರಕಾರ ನಡೆಸುವುದು ಉತ್ತಮ ಎಂದು ಪ್ರಧಾನಿ ಹೇಳಿರುವುದಾಗಿ ಬಿಜೆಪಿ ಸ್ಪಷ್ಟನೆ ನೀಡಿದೆ.
ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ನಾವು ನಮ್ಮ ಬಲ ಹೆಚ್ಚುವ ಅಚಲ ವಿಶ್ವಾಸ ಹೊಂದಿದ್ದೇವೆ. ಈ 140ಕ್ಷೇತ್ರಗಳ ಪೈಕಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ. ಸರಕಾರ ರಚಿಸಲು ಬೇಕಾದ ಬಹುಮತವನ್ನು ನಾವು ಪಡೆಯಲಿದ್ದೇವೆ. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಕನಿಷ್ಠ ಬಹುಮತದ ಹತ್ತಿರ ಬರಲೂ ಸಾಧ್ಯವಿಲ್ಲ ಎಂದು ಜೇಟ್ಲಿ ಹೇಳಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications